ತುಮಕೂರು: ನಗರದ ಶ್ರೀಸಿದ್ಧಾರ್ಥ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನುರಿತ ದಂತ ತಜ್ಞ ವ್ಶೆದ್ಯರಿಂದ 80 ವರ್ಷದ ವೃದ್ಧರಿಗೆ ಬಾಯಿ ಮತ್ತು ದವಡೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ.
ತುಮಕೂರು ತಾಲೂಕಿನ ದೊಡ್ಡಸಾರಂಗಿಯ ಕೃಷಿಕ ರಾಮಕೃಷ್ಣ ಐದು ವರ್ಷಗಳಿಂದ ದವಡೆಯಲ್ಲಿ ಎರಡೂವರೆ ಕೆಜಿ.ಯಷ್ಟು ದೊಡ್ಡ ಗ್ರಾತದ ಗಂಟಿನ ನೋವಿನಿಂದ ಬಳಲುತ್ತಿದ್ದರು, ನೋವು ಉಲ್ಬಣಗೊಂಡು ಶ್ರೀಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಒಳ ರೋಗಿಯಾಗಿ ದಾಖಲಾದರು.
ರೋಗಿಯ ದವಡೆಯಲ್ಲಿ ಬೆಳೆದ ದುರ್ಮಾಂಸವನ್ನು ಪ್ಲೆಕ್ಸಿಫಾರ್ಮ್ ಅಮೆಲೋಬ್ಲಾಸ್ಟೊಮಾ ಎಂಬ ಅಪರೂಪದ ರೋಗ ಎಂದು ಗುರುತಿಸಲಾಯಿತು. ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಸತತ ಐದು ಘಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ದವಡೆ ಶಸ್ತç ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಹೇಶ್‌ಕುಮಾರ್ ಮಾತನಾಡಿ, ಪ್ರಾಚಾರ್ಯ ಡಾ.ಪ್ರವೀಣ್ ಬಿ.ಕುಡ್ವ ಅವರ ಮಾರ್ಗದರ್ಶನದೊಂದಿಗೆ ಶಸ್ತ್ರಚಿಕಿತ್ಸೆಯಲ್ಲಿ
ಡಾ.ಮರಿಮಲ್ಲಪ್ಪ, ಡಾ.ಸುಪ್ರಿಯೋ ಪಾಲ್, ಅರವಳಿಕೆ ತಜ್ಞ ಡಾ.ರಮೇಶ್, ಡಾ.ಕೃಷ್ಣಮೂರ್ತಿ, ಡಾ.ಅಭಿಷೇಕ್ ಮತ್ತಿತರರು ಭಾಗವಹಿಸಿದ್ದರು.