ತುಮಕೂರು: ಗೋಕರ್ಣದ ರಾಮತೀರ್ಥ ಗುಡ್ಡದ ಅಪಾಯಕಾರಿ ಗುಹೆಯಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ರಷ್ಯ ಮಹಿಳೆಗೆ ತುಮಕೂರಿನ ವಿದೇಶಿ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ನೀಡಲಾಗಿದ್ದು ಆಕೆಯನ್ನು ಕಾಣಲು ಗುರುವಾರ ಇಸ್ರೇಲ್ನ ಡ್ರೋರ್ ಗೋಲ್ಡ್ ಸ್ಟೀನ್ ಆಗಮಿಸಿದ್ದರು.
ಅಧಿಕಾರಿಗಳಿಂದ ಅನುಮತಿ ಇಲ್ಲದ ಕಾರಣಕ್ಕೆ ಭೇಟಿಗೆ ಅವಕಾಶವಾಗಿಲ್ಲ. ಗೋವಾದಿಂದ ಬಂದು ರಾಮತೀರ್ಥ ಗುಹೆಯಲ್ಲಿದ್ದ ರಷ್ಯಾದ ನಿನಾ ಕುಟಿನಾ(40), ಮಕ್ಕಳಾದ ಪ್ರೀಮಾ (6) ಮತ್ತು ಅಮಾ (4) ಮೂವರನ್ನೂ ತುಮಕೂರಿನ ಎ್ಡಿಸಿ (ಾರಿನ್ ಡಿಟೆನ್ಷನ್ ಸೆಂಟರ್)ಯಲ್ಲಿ ಆಶ್ರಯ ಕಲ್ಪಿಸಲಾಗಿದೆ.
ನಿನಾ ಜತೆ ಲೀವಿಂಗ್ ಟುಗೆದರ್ನಲಿದ್ದು ಈಗ ಬೇರ್ಪಟ್ಟಿರುವ ಡ್ರೋರ್ ಮಕ್ಕಳಿಗಾಗಿ ಮತ್ತೊಮ್ಮೆ ಅಧಿಕಾರಿಗಳ ಅನುಮತಿ ಪಡೆದುಕೊಂಡು ಬರುವುದಾಗಿ ಪ್ರತಿಕ್ರಿಯಿಸಿದರು.