ಜಿಲ್ಲೆ

ಜಿಲ್ಲೆಯಲ್ಲಿ 64 ಶುದ್ಧ ನೀರಿನ ಘಟಕದಲ್ಲಿ ನೀರಿಲ್ಲ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಜಿಲ್ಲೆಯಾದ್ಯಂತ ದುರಸ್ತಿಯಾಗಬೇಕಿದ್ದ 101 ಶುದ್ದ ಕುಡಿಯುವ ನೀರಿನ ಘಟಕಗಳ ಪೈಕಿ 74 ಘಟಕಗಳು ದುರಸ್ಥಿಯಾಗಿದ್ದು, ಹಳೆಯ ಮತ್ತು ಹೊಸ ಪ್ರಕರಣ ಸೇರಿ ಇಲ್ಲಿಯವರೆಗೆ ಇನ್ನೂ 64 ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಬಾಕಿಯಿದೆ.

ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಶೆಲ್ಟರ್‌ಗಳಿಲ್ಲದೆ ಮಳೆ ಹಾಗೂ ಬಿಸಿಲಿನಿಂದ ಜನರು ಬಳಲುತ್ತಿದ್ದು, ನರೇಗಾದಡಿ ಮೊದಲ ಆದ್ಯತೆ ಮೇರೆಗೆ ಒಂದು ಸಾವಿರ ಬಸ್ ನಿಲ್ದಾಣಗಳನ್ನು ಮುಖ್ಯ ಸ್ಥಳಗಳಲ್ಲಿ ನಿರ್ಮಿಸುವ ಜಿಪಂ ಸಿಇಒ ಅನುಮೋದನೆ ಪಡೆದು ಪ್ರಸ್ತಾವನೆ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಹೇಳಿದರು.