ಜಿಲ್ಲೆ

ಬೆಳೆ ವಿಮೆ ನೋಂದಣಿಗೆ ಮನವಿ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಮಳೆ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಬೆಳೆ ಹಾನಿಯಾದ ಸಂದರ್ಭದಲ್ಲಿ ರೈತರು ಆರ್ಥಿಕ ಸಂಕಷ್ಟದಿಂದ ಹೊರಬರಲು ಬೆಳೆ ವಿಮಾ ಯೋಜನೆ ಜಾರಿಗೆ ತರಲಾಗಿದ್ದು, ಬಿತ್ತನೆಯಿಂದ ಕಟಾವು ಹಂತದವರೆಗೆ ಬರ, ಶುಷ್ಕ, ಪರಿಸ್ಥಿತಿ, ಆಲಿಕಲ್ಲು ಮಳೆ, ಭೂ ಕುಸಿತ, ಮತ್ತಿತರ ಇಳುವರಿ ನಷ್ಟ ಸಂಭವಿಸಿದಲ್ಲಿ ಸಮಗ್ರ ವಿಮಾ ಭದ್ರತೆಯನ್ನು ಒದಗಿಸಲಾಗುತ್ತಿದೆ.

ಬೆಳೆ ಕಟಾವಿನ ನಮತರ ಜಮೀನಿನಲ್ಲೇ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಕಟಾವು ಮಾಡಿದ 2 ವಾರ(14 ದಿನ)ದೊಳಗೆ ಪ್ರಕೃತಿ ವಿಕೋಪದಿಂದ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಪರಿಹಾರ ನೀಡಲಾಗುತ್ತಿದೆ.

.

ಭತ್ತ, ಶೇಂಗಾ, ರಾಗಿ,ಸಾಮೆ ಹಾಗೂ ಹುರುಳಿ ಬೆಳೆಗಳಿಗೆ ವಿಮಾ ಕಂತು ಪಾವತಿಸಲು ಆಗಸ್ಟ್​ 16 ಕಡೆಯ ದಿನವಾಗಿದ್ದು, ಹೆಚ್ಚಿನ ರೈತರು ವಿಮಾ ಕಂತನ್ನು ಪಾವತಿಸುವ ಮೂಲಕ ನೋಂದಾಯಿಸಿಕೊಳ್ಳಬೇಕು.

ವಿಮೆ ಮಾಡಿಸಲು ಗ್ರಾಮ ಒನ್​ ಸೆಂಟರ್​, ಸಾಮಾನ್ಯ ಸೇವಾ ಕೇಂದ್ರ(ಸಿಎಸ್​ಸಿ ಸೆಂಟರ್​), ಸಮೀಪದ ಬ್ಯಾಂಕ್​ ಶಾಖೆಯನ್ನು ಸಂಪರ್ಕಿಸಬಹುದು.