ಜಿಲ್ಲೆ

ಪೌರ ರಕ್ಷಣಾ ಸ್ವಯಂ ಸೇವಕರ ನೇಮಕಾತಿ

ತುಮಕೂರು: ಯುದ್ದದಂತಹ ಸಂದರ್ಭಗಳಲ್ಲಿ ಉಂಟಾಗುವ ಸಂಭವನೀಯ ಅಪಘಾತಗಳಿಂದ ಸಾರ್ವಜನಿಕರನ್ನು ರಕ್ಷಿಸಲು ಪೌರ ರಕ್ಷಣಾ ಸ್ವಯಂ ಸೇವಕರ ನೇಮಕಾತಿಗಾಗಿ ಮೇ.31ರ ವರೆಗೆ ನೋಂದಣಿ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್​ ಗೋಪಾಲ್​ ತಿಳಿಸಿದ್ದಾರೆ.

ಭಾಗವಹಿಸಲಿಚ್ಛಿಸುವ ಅಭ್ಯರ್ಥಿಗಳು ನಿಗಧಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮೇ 31ರೊಳಗಾಗಿ ಸಲ್ಲಿಸಬೇಕು. ನಿಗಧಿತ ಅರ್ಜಿ ನಮೂನೆಯನ್ನು ಬಟವಾಡಿಯಲ್ಲಿರುವ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರ ಕಚೇರಿ ಅಥವಾ ಜಾಲತಾಣ: hgcd.karnataka.gov.in

ಅನ್ನು ಸಂಪರ್ಕಿಸಿ ಪಡೆಯಬಹುದು.

ಮಾಹಿತಿಗೆ ದೂ.0816 2009116, ಮೊ.9448544080, 9901316107 ಸಂಪರ್ಕಿಸಿ.