ಜಿಲ್ಲೆ

ಮಾಧುಸ್ವಾಮಿ.. ಇನ್ನೋಬ್ಬ ಸ್ವಾಮಿ ಪಕ್ಷಕ್ಕೆ ಅನಿವಾರ್ಯವಲ್ಲ

ತುಮಕೂರು: ಮಾಧುಸ್ವಾಮಿ, ಇನ್ನೊಬ್ಬ ಸ್ವಾಮಿ, ನಾನೂ ಸೇರಿದಂತೆ ಯಾರೂ ಪಕ್ಷಕ್ಕೆ ಅನಿವಾರ್ಯವಲ್ಲ, ಸಿಎಂ ಸಿದ್ದರಾಮಯ್ಯ ಸ್ನೇಹಿತರಿರಬೇಕು ಹಾಗಾಗಿ, ಭೇಟಿ ಮಾಡಿರಬಹುದು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಪ್ರತಿಕ್ರಿಯಿಸಿದರು.

ತುಮಕೂರಿನಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅವರು(ಜೆಸಿಎಂ) ಸಿಎಂ ಭೇಟಿಯಾಗಿರುವ ಬಗ್ಗೆ ಪಕ್ಷದವರನ್ನು ಕೇಳಬೇಕು, ನಾನು ಭಾರತ ಸರ್ಕಾರದ ಮಂತ್ರಿಯಿದ್ದೇನೆ, ಈ ಕ್ಷೇತ್ರದ ಸಂಸದನಿದ್ದೇನೆ, ಯಾರೊ ಯಾರನ್ನೋ ಭೇಟಿಯಾಗಿ ಅವರ ಜತೆಗೋದ ಮಾತ್ರಕ್ಕೆ ಎಲ್ಲವೂ ಬದಲಾವಣೆಯಾಗುವುದಿಲ್ಲ ಎಂದರು.

ಕಳೆದ ಲೋಕಸಭೆ ಚುನಾವಣೆ ಸಮಯದಿಂದಲೂ ಸೋಮಣ್ಣ ಹಾಗೂ ಮಧುಸ್ವಾಮಿ ನಡುವೆ ಅಂತರವಿದ್ದು ಪ್ರಸ್ತುತ ಜಿಲ್ಲಾ ಬಿಜೆಪಿಯಲ್ಲಿ ಮೂರು ಗುಂಪುಗಳಾಗಿರುವುದು ಗುಟ್ಟಾಗಿ ಉಳಿದಿಲ್ಲ.