ತುಮಕೂರು: ಕಳೆದೆರಡು ದಿನಗಳಿಂದ ಬಿಡುವು ನೀಡಿದ ಸುರಿದಿದ್ದ ಮಳೆ ಗುರುವಾರ ಕೊಂಚ ಬಿಡುವು ನೀಡಿತು, ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಕೂಡ ಜಿಲ್ಲೆಯಲ್ಲಿ ಬೀಳುವ ಸಾಧ್ಯತೆಯಿದೆ ಎಂದು ವರದಿ ನೀಡಿದೆ.
ಇಂದು ಚಿಕ್ಕನಾಯಕನಹಳ್ಳಿಯಲ್ಲಿ 23.1, ಗುಬ್ಬಿ 17.7, ಕೊರಟಗೆರೆ 21, ಕುಣಿಗಲ್ 18, ಮಧುಗಿರಿ 22.4, ಪಾವಗಡ 20, ಶಿರಾ 20.3, ತಿಪಟೂರು20.4, ತುಮಕೂರು 18.5 ಹಾಗೂ ತುರುವೇಕೆರೆಯಲ್ಲಿ 18.7ಮಿಮೀ ಮಳೆ ಬೀಳುವ ನಿರೀೆಯಿದೆ. ಗುರುವಾರ ಅತೀ ಹೆಚ್ಚು ಮಳೆ ಸುರಿಯುವ ನಿರೀೆಯಿತ್ತಾದರೂ ದಿನಪೂರ್ತಿ ಮೋಡ ಕವಿದ ವಾತಾವರಣವಷ್ಟೇ ಇತ್ತು.
ಕುಣಿಗಲ್ ತಾಲೂಕು ಮಾಕೋರ್ನಹಳ್ಳಿ ಜಲಾಶಯ, ತುಮಕೂರು ತಾಲೂಕಿನ ಮರಳೂರು ಕೆರೆ ಮಳೆ ನೀರಿಗೆ ತುಂಬಿ ಕೋಡಿ ಹರಿಯುತ್ತಿದೆ, ಇನ್ನು ತುರುವೇಕೆರೆ ತಾಲೂಕು ಮಲ್ಲಾಟ್ಟ, ಶಿರಾ ತಾಲೂಕು ಕಳ್ಳಂಬೆಳ್ಳ, ತುಮಕೂರಿನ ಅಮಾನಿಕೆರೆ ಸೇರಿದಂತೆ ಜಿಲ್ಲೆಯ ವಿವಿಧ ಕೆರೆಗಳು ಹೇಮಾವತಿ ನೀರು ಹರಿದ ಕಾರಣಕ್ಕೆ ಕೋಡಿಬಿದ್ದಿವೆ.