ಪಾವಗಡ: ತಾಲೂಕಿನ ನಾಗೇನಹಳ್ಳಿ ತಾಂಡ ಮತ್ತು ಶ್ರೀರಂಗಪುರ ತಾಂಡದ 40ಕ್ಕೂ ಹೆಚ್ಚು ಜನರು ಗ್ರಾಮಸ್ಥರು ವಾಂತಿ. ಬೇದಿಯಿಂದ ಬಳಲಿ ತಾಲ್ಲೂಕಿನ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ತಡವಾಗಿ ಎಚ್ಚೆತ್ತುಕೊಂಡಿದ್ದು ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಪೋಟೋ ತೆಗೆದುಕೊಂಡು ವಾಪಸಾಗುತ್ತಿದ್ದಾರೆ.
ಮದುವೆ ಮನೆಯಲ್ಲಿ ಊಟ ಸೇವಿಸಿ ಕಳೆದ 5 ದಿನಗಳಿಂದ ವಾಂತಿ, ಬೇದಿಯಿಂದ ಬಳಲಿ ಪಾವಗಡಕ್ಕೆ ಬಂದು ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆಂದು ತುಮಕೂರು ಜಿಲ್ಲಾ ಆಸ್ಪತ್ರೆ ಹೋಗಿ ಚಿಕಿತ್ಸೆ ಫಲಿಸದೆ ರಾಮೀ ಬಾಯಿ (70) ಎಂಬ ಮಹಿಳೆ ಮೃತರಾಗಿದ್ದಾರೆ. ಮರಣೋತ್ತರ ಪರೀಕ್ಷಾ ವರದಿಯಲ್ಲಿ ದೇಹದಲ್ಲಿ ಮದ್ಯದ ಅಂಶಪತ್ತೆಯಾಗಿದೆ ಎಂಬ ವಿಷಯವನ್ನೇ ಮುಂದಿಟ್ಟುಕೊಂಡು ಆರೋಗ್ಯ ಸಮಸ್ಯೆಯನ್ನೇ ತಿರುಚುವ ಪ್ರಯತ್ನಗಳೂ ನಡೆದಿದೆ ಎಂದು ಸ್ಥಳೀಯರು ದೂರಿದ್ದಾರೆ.
ನಾಗೇನಹಳ್ಳಿ ಗ್ರಾಮದಲ್ಲಿ ತಾತ್ಕಾಲಿಗ ಆರೋಗ್ಯ ಕೇಂದ್ರ ತೆರೆದು ಚಿಕಿತ್ಸೆ ನೀಡಲಾಗಿದೆ. ಈ ಕೇಂದ್ರಕ್ಕೆ ಭೇಟಿ ನೀಡುವ ಅಧಿಕಾರಿಗಳು ಕೇವಲ ಪೋಟೋ ತೆಗೆದುಕೊಂಡು ಹಿರಿಯ ಅಧಿಕಾರಿಗಳಿಗೆ ವರದಿ ಒಪ್ಪಿಸಿ ತೆರಳುತ್ತಿದ್ದು ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ.
ಶ್ರೀರಂಗಪುರ ತಾಂಡದಲ್ಲಿ ಮಂಗಳವಾರ ಸಂಜೆ ಹೊಸದಾಗಿ ಲಕ್ಷ್ಮೀದೇವಿ ಎನ್ನುವವರು ವಾಂತಿ ಬೇದಿಯಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿದ್ದಾರೆ ಹೆಚ್ಚಿನ ಚಿಕಿತ್ಸೆಗೆಂದು ತುಮಕುರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಕೆ.ಸೇವಾಲಾಲ್ ಪುರ ಗ್ರಾಮದ ಮೂವರಿಗೆ ಸಹ ವಾಂತಿ ಬೇದಿಯಿಂದ ಬಳುತಿದ್ದಾರೆ.
ನಾಗೇನಹಳ್ಳಿ ಒಂದು ಗ್ರಾಮದಲ್ಲಿ ಮಾತ್ರ ಆರೋಗ್ಯ ಕೇಂದ್ರ ತೆರೆದು ಚಿಕಿತ್ಸೆ ನೀಡುತ್ತಿದ್ದಾರೆ. ಶ್ರೀರಂಗಪುರ ತಾಂಡದಲ್ಲಿಯೂ ಸಹ ಅಧಿಕಾರಿಗಳು 5 ಜನರಿಗೆ ವಾಂತಿ ಬೇದಿಯಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ವಾಸ್ತವವಾಗಿ ಶ್ರೀರಂಗಪುರ ತಾಂಡದಲ್ಲಿ 15 ಕ್ಕೂ ಹೆಚ್ಚಿನ ಜನರಿಗೆ ವಾಂತಿ ಬೇದಿಯಿಂದ ಇಂದಿಗೂ ಸಹ ಚಿಕಿತ್ಸೆಗೆಂದು ಪಟ್ಟಣದ ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಧಿಕಾರಿಗಳು ಭೇಟಿ ಮಾಡಿಲ್ಲಾ, ಗ್ರಾ.ಪಂ ಮಟ್ಟದ ಅಧಿಕಾರಿಗಳು ಬಂದು ಫೋಟೊ ತೆಗೆದುಕೊಂಡು ಹೋಗುತ್ತಿದ್ದಾರೆ. ನಮ್ಮ ಪರಿಸ್ಥಿತಿಯನ್ನು ಕೇಳುವವರಿಲ್ಲ ವೆಂದು ಶ್ರೀರಂಪುರ ತಾಂಡದ ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮಸ್ಥರು ಮಾತನಾಡಿ ನಾವು ದಿನ ಕೂಲಿ ಮಾಡಿ ಜೀವನ ಸಾಗಿಸುವವರು ನಮಗೆ ಹಿಂದೆ ಮುಂದೆ ಯಾರಿಲ್ಲಾ, ಉಶಾರಿಲ್ಲವೆಂದರೂ ಸಹ ನಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕೂಲಿಕೆಸಲಕ್ಕೆ ಹೋಗುತ್ತಿದ್ದೇವೆ. ಕಾರಣ ಖಾಸಗಿ ಆಸ್ಪತ್ರೆ ಹೋಗಬೇಕಾದರೆ ಹಣದ ಅವಶ್ಯಕತೆ ಇರುತ್ತದೆ. ಆದರೆ ಕೂಲಿ ಕೆಲಸ ಮುಗಿಸಿ ಮನೆಗೆ ಬಂದಾಗ ಮಕ್ಕಳಿಗೆ ಹಾಗೆಯೇ ವಾಂತಿ ಬೇದಿ ಸುಸ್ತು ಆದರೆ ಮತ್ತೆ ರಾತ್ರಿ ಎನ್ನದೆ ಯಾರದೊ ಕೈ ಕಾಲು ಹಿಡಿದು ದ್ವಿಚಕ್ರ ವಾಹನಗಳಲ್ಲಿ ಹೋಗಿ ಚಿಕಿತ್ಸೆ ಪಡೆದು ಮನೆಗೆ ಬರುವಂತಾಗಿದೆ. ರಾತ್ರಿ ಸಮಯದಲ್ಲಿ ಆಸ್ಪತ್ರೆಯಿಂದ ಬರಬೇಕಾದರೆ ಕರಡಿ, ಕಾಡು ಹಂದಿ ದಾಳಿ ನಡೆಸುವ ಪ್ರಾಣ ಭಯದಿಂದ ಓಡಾಡುತ್ತಿದ್ದೇವೆ. ಅಧಿಕಾರಿಗಳು ಗಮನ ಹರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.