ಪಾವಗಡ: ಪಟ್ಟಣದ ಶ್ರೀನಿವಾಸ ನಗರದಲ್ಲಿ ಜಿಲಾನಿ ಎಂಬುವರರ ಮನೆಯ ಬೀಗ ಹೊಡೆದು ಸುಮಾರು ಲಕ್ಷ ರೂ. ನಗದು, 13 ಬಂಗಾರದ ಉಂಗುರ, ಕಿವಿ ಓಲೆ ಒಂದು ಜೊತೆ, ಮೂರು ಬೆಳ್ಳಿ ಚೈನ್ ಕಳ್ಳತನ ಮಾಡಲಾಗಿದೆ.
ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಕಳ್ಳರು ಕೈಚಳಕ ತೋರಿಸಿದ್ದು ಘಟನೆ ಸ್ಥಳೀಯರಲ್ಲಿ ಭಯ ಮೂಡಿಸಿದೆ.
ಜಿಲಾನಿ ಕುಟುಂಬ ಬೆಂಗಳೂರಿಗೆ ತೆರಳಿದ್ದನ್ನು ತಿಳಿದ ಕಳ್ಳರು ಗುರುವಾರವೇ ಕಳ್ಳತನ ಮಾಡಿದ್ದು ಶುಕ್ರವಾರ ಮಧ್ಯಾಹ್ನ ಮನೆಗೆ ವಾಪಸಾದಾಗ ಕೃತ್ಯ ಬಯಲಾಗಿದೆ.
ಪಾವಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.