ಪಾವಗಡ: ಪಾವಗಡ ತಾಲೂಕಿನ ಕೊಡುಮಡುಗು ಗ್ರಾಮದ ಹೊರವಲಯದಲ್ಲಿ ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿಯಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟು ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಆಂಧ್ರಪ್ರದೇಶದ ರೊದ್ದಂ ನಿಂದ ಕರ್ನಾಟಕದ ಕೊಡುಮಡುಗು ಕಡೆಗೆ ಬರುತ್ತಿದ್ದ ಮತ್ತು ಕೊಡಮಡುಗು ಗ್ರಾಮದಿಂದ ಆಂಧ್ರ ಕಡೆ ಹೋಗುತ್ತಿದ್ದ ಬೈಕ್ಗಳ ನಡುವೆ ಮುಖಾಮುಖಿ ಸಂಭವಿಸಿದ್ಆಂದು ಧ್ರಪ್ರದೇಶದ ಪೆದ್ದಗುವ್ವಲಪಲ್ಲಿ ರಾಮಾಂಜನೇಯಲು(56) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಮೃತಪಟ್ಟಿರುವಂತಹ ರಾಮಾಂಜನೇಯಲು ಅವರ ಪುತ್ರ ಕೋಟೇಶ್ವರಲು ಅವರಿಗೆ ಗಂಭೀರ ಗಾಯಗಳಾಗಿದ್ದು, ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಪಾತ್ರಪಲ್ಲಿ ಮೊದ್ಲೇಟಪ್ಪ ಕಾಲು ಮುರಿದು ಗಂಭೀರ ಗಾಯಗಳಾಗಿದೆ. ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.