ಜಿಲ್ಲೆ

ಆರೋಪಿಯ ಖಾತೆಯಲ್ಲಿ ಹಣ ಕದ್ದ ಪಿಎಸ್​ಐ ಅಮಾನತು

ತುಮಕೂರು: ಗೃಹ ಸಚಿವರ ತವರು ಜಿಲ್ಲೆಯಲ್ಲಿ ಪೊಲೀಸ್​ ಅಧಿಕಾರಿಗಳ ಕಾರ್ಯವೈಖರಿ ಬೆಚ್ಚೀಬಿಳಿಸುವಂತಿದೆ. ತುರುವೇಕೆರೆ ಪೊಲೀಸ್​ ಠಾಣೆ ಸಬ್​ ಇನ್ಸ್​ಪೆಕ್ಟರ್​ ಸಂಗಪ್ಪ ಮೇಟಿ ಕರ್ತವ್ಯಲೋಪದ ಆರೋಪದ ಮೇಲೆ ಸೇವೆಯಿಂದ ಅಮಾನತಾಗಿದ್ದಾರೆ.

ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯ ವಿಚಾರಣೆ ಸಂದರ್ಭದಲ್ಲಿ ಆತನ ಮೊಬೈಲ್​ ವಶಕ್ಕೆ ಪಡೆದುಕೊಂಡಿದ್ದ ಸಬ್​ ಇನ್ಸ್​ಪೆಕ್ಟರ್​ ಸಂಗಪ್ಪ ಮೇಟಿ ಆರೋಪಿ ಪೋನ್​ಪೇ ಪಾಸ್​ವರ್ಡ್​ ಪಡೆದು, ಅದರ ಮೂಲಕ ಆನ್​ಲೈನ್​ ಬೆಟ್ಟಿಂಗ್​ ಆಡಿದ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ.

ಕರ್ತವ್ಯ ಲೋಪದ ಆರೋಪದ ಮೇಲೆ ತುಮಕೂರು ಜಿಲ್ಲಾ ಪೊಲೀಸ್​ ಅಧೀಕ್ಷಕ ಕೆ.ವಿ.ಅಶೋಕ್​ ಅಮಾನತುಗೊಳಿಸಿದ್ದು ಆರೋಪಿ ಪಿಎಸ್​ಐ ಸಂಗಪ್ಪ ಮೇಟಿ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಬ್ಯಾಂಕ್​ ಖಾತೆಯಲ್ಲಿದ್ದ ಸುಮಾರು 95000 ರೂ. ಹಣ ದುರುಪಯೋಗ ಪಡಿಸಿಕೊಂಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ.