ಜಿಲ್ಲೆ

ತುಮಕೂರಿನ ಲಾಡ್ಜ್​ನಲ್ಲಿ ಪಿಎಸ್​ಐ ಆತ್ಮಹತ್ಯೆ

ತುಮಕೂರು:ದಾವಣಗೆರೆ ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ನಾಗರಾಜಯ್ಯ(55) ತುಮಕೂರಿನ ದ್ವಾರಕಾ ಹೋಟೆಲ್​ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಜು.1ರಂದು ತುಮಕೂರು ನಗರದದಲ್ಲಿರುವ ದ್ವಾರಕಾ ಹೋಟೆಲ್ ಲಾಡ್ಜ್ ನಲ್ಲಿ ರೂಂ ಬಾಡಿಗೆ ಪಡೆದಿದ್ದ ಸಬ್ಇನ್ಸ್ ಪೆಕ್ಟರ್​ ನಾಗರಾಜು.

4ನೇ ಮಹಡಿಯಲ್ಲಿ ರೂಂ ಬಾಡಿಗೆ ಪಡೆದಿದ್ದರು. ಡೇತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು ಅವರಿಗೆ ಸಂಬಂಧಪಟ್ಟ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೌಟುಂಬಿಕ ಸಮಸ್ಯೆಗಳನ್ನ ಪತ್ರದಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಲಾಡ್ಜ್​ನಲ್ಲಿ ದುರ್ವಾಸನೆ ಬಂದಾಗ ಲಾಡ್ಜ್​ ಸಿಬ್ಬಂದಿಗೆ ಆತ್ಮಹತ್ಯೆಗೆ ವಿಷಯ ತಿಳಿದುಬಂದಿದೆ. ತುಮಕೂರು ನಗರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.