ಜಿಲ್ಲೆ

ಪ್ರಜ್ವಲ್ ತಪ್ಪು ಮಾಡಿಲ್ಲ ಎಂದರೆ ಮಾಡಿದವರು ಯಾರು? ಮೊದಲು ಎಸ್‌ಐಟಿ ಮುಂದೆ ಹಾಜರಾಗಲಿ ಎಂದು ಗೃಹ ಸಚಿವ

ಡಾ.ಶ್ರೀಹರ್ಷ ಸೋರಲಮಾವು

 ತುಮಕೂರು: ಹಾಸನ ಸಂಸದ ಪ್ರಜ್ವಲ್‌ರೇವಣ್ಣ ವೀಡಿಯೋ ಮೂಲಕ ಎಸ್‌ಐಟಿ ತನಿಖೆಗೆ ಸಹಕಾರ ನೀಡುವುದಾಗಿ ಕಳುಹಿಸಿರುವ ವೀಡಿಯೋ ಗಮನಿಸಿದ್ದೇನೆ, ಬ್ಲೂಕಾರ್ನರ್ ನೋಟಿಸ್ ಕೂಡ ನೀಡಲಾಗಿದ್ದು ಅವರನ್ನು ಕರೆತರಲು ಕೇಂದ್ರಕ್ಕೂ ಮನವಿ ಮಾಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಜ್ವಲ್ ಕೂಡಲೇ ಎಸ್‌ಐಟಿ ಮುಂದೆ ಹಾಜರಾಗಿ ಹೇಳಿಕೆ ನೀಡಬೇಕು, ಬಂಧನಕ್ಕೆ ಈಗಾಗಲೇ ವಾರೆಂಟ್ ನೀಡಲಾಗಿದೆ. ಅವರೇ ಶರಣಾಗುವುದಾಗಿ ಹೇಳಿದ್ದು ಈ ಬಗ್ಗೆ ಅಧಿಕಾರಿಗಳು ನಿರ್ಧರಿಸುತ್ತಾರೆ ಎಂದರು.

ಮೇ.31ರಂದು ಬೆಳಗ್ಗೆ 10ಕ್ಕೆ ಎಸ್‌ಐಟಿ ಮುಂದೆ ಹಾಜರಾಗುವುದಾಗಿ ಹೇಳಿದ್ದಾರೆ, ತನಿಖೆಗೆ ಸಹಕಾರ ಮಾಡುತ್ತೇನೆ ಎಂದು ಹೇಳಿರುವುದನ್ನು ನಾನು ಸ್ವಾಗತ ಮಾಡುತ್ತೇನೆ, ಕರ್ನಾಟಕದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ ಎಂದು ಪರಮೇಶ್ವರ್ ಬೇಸರಿಸಿದರು.

 ಪ್ರಧಾನಮಂತ್ರಿಗಳಿಗೆ, ನಮ್ಮ ಮುಖ್ಯಮಂತ್ರಿಗಳು ಎರಡು ಬಾರಿ ಪತ್ರ ಬರೆದಿದ್ದರು, ಸಿಬಿಐಗೆ ಮನವಿ ಮಾಡಿಕೊಂಡಿದ್ವಿ, ಇಂಟರ್‌ಪೋಲ್‌ಗೆ ರಿಕ್ವೆಸ್ಟ್ ಮಾಡಿಕೊಂಡಿದ್ದೆವು, ಬ್ಲೂಕಾರ್ನರ್ ನೋಟಿಸ್ ಕೂಡ ಈಗಾಗಲೇ ನೀಡಲಾಗಿದೆ ಎಂದರು.

 ಪಾಸ್‌ಪೋರ್ಟ್ ರದ್ದು ಪ್ರಕ್ರಿಯೆ ಕೂದ ಆರಂಭ ಮಾಡದ್ದೇವೆ ಅವರು ಹೇಳಿಕೆ ನೀಡಿರುವ ಹಾಗೆ ಅವರು ವಿದೇಶಕ್ಕೆ ಹೋಗುವಾಗ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ, ಪ್ರಕರಣ ದಾಖಲಾದ ನಂತರ ಅವರನ್ನು ವಾಪಸ್ ಕರೆಸಿಕೊಂಡು ವಿಚಾರಣೆ ನಡೆಸಲು ಕೇಂದ್ರ ಸರ್ಕಾರ ನಮಗೆ ಸಹಕಾರ ನೀಡಲಿಲ್ಲ ಎಂದು ದೂರಿದರು.