ಜಿಲ್ಲೆ

ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಪವರ್​ ಗ್ರಿಡ್​ ಕಾಪೋರ್ರೇಷನ್​ ಆಫ್​ ಇಂಡಿಯಾ ಲಿಮಿಟೆಡ್​ ಸಂಸ್ಥೆಯು ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ತಾತ್ಕಾಲಿಕವಾಗಿ 2 ವರ್ಷಗಳ ಅವಧಿಗಾಗಿ ನೇಮಕಾತಿ ಮಾಡಿಕೊಳ್ಳಲು ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.


ಫೀಲ್ಡ್​ ಇಂಜಿನಿಯರ್​(ಎಲೆಕ್ಟ್ರಿಕಲ್​), ಫೀಲ್ಡ್​ ಇಂಜಿನಿಯರ್​(ಸಿವಿಲ್​), ಫೀಲ್ಡ್​ ಸೂಪರ್​ವೈಸರ್​(ಎಲೆಕ್ಟ್ರಿಕಲ್​) ಹಾಗೂ ಫೀಲ್ಡ್​ ಸೂಪರ್​ವೈಸರ್​(ಸಿವಿಲ್​) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದ್ದು, ಆಸಕ್ತ ಅಭ್ಯರ್ಥಿಗಳು ವೆಬ್​ಸೈಟ್​ ವಿಳಾಸ http://www.powergrid.in /careers ನಲ್ಲಿ ಭರ್ತಿ ಮಾಡಿ ಸೆ.27ರೊಳಗೆ ಸಲ್ಲಿಸಬಹುದು.

ಫೀಲ್ಡ್​ ಇಂಜಿನಿಯರ್​(ಎಲೆಕ್ಟ್ರಿಕಲ್​) ಹುದ್ದೆಗಾಗಿ ಎಲೆಕ್ಟ್ರಿಕಲ್​ ವಿಷಯದಲ್ಲಿ ಬಿಇ/ಬಿ.ಟೆಕ್​/ಬಿಎಸ್ಸಿ(ಇಂಜಿನಿಯರಿಂಗ್​), ಫೀಲ್ಡ್​ ಇಂಜಿನಿಯರ್​(ಸಿವಿಲ್​) ಹುದ್ದೆಗಾಗಿ ಸಿವಿಲ್​ ವಿಷಯದಲ್ಲಿ ಬಿಇ/ಬಿ.ಟೆಕ್​/ಬಿಎಸ್ಸಿ(ಇಂಜಿನಿಯರಿಂಗ್​), ಫೀಲ್ಡ್​ ಸೂಪರ್​ವೈಸರ್​(ಎಲೆಕ್ಟ್ರಿಕಲ್​) ಹುದ್ದೆಗಾಗಿ ಎಲೆಕ್ಟ್ರಿಕಲ್​ ಡಿಪ್ಲೋಮಾ ಹಾಗೂ ಫೀಲ್ಡ್​ ಸೂಪರ್​ವೈಸರ್​(ಸಿವಿಲ್​) ಹುದ್ದೆಗಾಗಿ ಸಿವಿಲ್​ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.

ಮಾಹಿತಿಗೆ ಉದ್ಯೋಗ ವಿನಿಮಯ ಕಚೇರಿ ಅಥವಾ ದೂ. 0816 -2278488 ಸಂಪರ್ಕಿಸಿ.