ತುಮಕೂರು: ತುಮಕೂರು ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಚೆ ಕಚೇರಿಗಳಲ್ಲಿ ರಾಷ್ಟ್ರಧ್ವಜ ಲಭ್ಯವಿದ್ದು, ಒಂದು ಬಾವುಟಕ್ಕೆ 25ರೂ. ನಿಗಧಿಪಡಿಸಲಾಗಿದೆ.
ಸ್ವಾತಂತ್ರ್ಯೋತ್ಸವದಲ್ಲಿ ಎಲ್ಲರೂ ಮನೆಯ ಮೇಲೆ ತ್ರಿವರ್ಣ ಹಾರಾಟ ಮಾಡಲು ಅವಕಾಶವಿದ್ದು ಆಸಕ್ತ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬಹುದು ಎಂದು ಜಿಲ್ಲಾ ಅಂಚೆ ವಿಭಾಗದ ಅಧೀಕ್ಷಕ ಬಿ.ಎಂ.ಶಂಕರಪ್ಪ ತಿಳಿಸಿದ್ದಾರೆ.