ತುಮಕೂರು: ಜಿಲ್ಲೆಯಾದ್ಯಂತ ಅಂಚೆ ಜೀವ ವಿಮಾ ಪ್ರತಿನಿಧಿಗಳ ನೇಮಕಾತಿ ಮಾಡಲು ಕನಿಷ್ಟ ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಭಾರತೀಯ ಅಂಚೆ ಇಲಾಖೆ ಅರ್ಜಿ ಆಹ್ವಾನಿಸಿದೆ.
ಅಂಚೆ ಜೀವ ವಿಮಾ ಮತ್ತು ಗ್ರಾಮೀಣ ಅಂಚೆ ಜೀವ ವಿಮಾ ಏಜೆಂಟ್ಗಳ ನೇಮಕಾತಿಗೆ ಅ.29ರಂದು ಮಧ್ಯಾಹ್ನ 12ಕ್ಕೆ ತುಮಕೂರಿನ ಅಂಚೆ ಅಧೀಕ್ಷಕ, ತುಮಕೂರು ಅಂಚೆ ವಿಭಾಗೀಯ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದ್ದು ಆಸಕ್ತರು ಭಾಗವಹಿಸಬಹುದು ಎಂದು ಅಂಚೆ ಅಧೀಕ್ಷಕ ಬಿ.ಎಂ.ಶಂಕರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.