ಜಿಲ್ಲೆ

ಪಿಎಂ ಕೃಷಿ ಸಮ್ಮಾನ್ ನಿಧಿ ಯೋಜನೆಗೆ ಇ-ಕೆವೈಸಿ ಮಾಡಿಸಿ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಪ್ರತಿ ಫಲಾನುಭವಿ ರೈತರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ರಮೇಶ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 300977 ಅರ್ಹ ರೈತರಿದ್ದು, ಇಲ್ಲಿಯವರೆಗೆ 245070 (ಶೇ.81) ರೈತರÀ ಇ-ಕೆವೈಸಿಯು ಪೂರ್ಣಗೊಂಡಿದೆ. ಉಳಿಕೆ 55907 (ಶೇ.19) ರೈತರ ಇ-ಕೆವೈಸಿ, ಮಾಡಿಸಲು ಬಾಕಿ ಇದ್ದು, ಪ್ರತಿ ಫಲಾನುಭವಿ ರೈತರು ಇ-ಕೆ.ವೈ.ಸಿ. ಮಾಡಿಸಬೇಕು ಎಂದು ಮನವಿ ಮಾಡಿದ್ದಾರೆ.