ಬಸವನಬಾಗೇವಾಡಿ ಪಟ್ಟಣದ ಗಲ್ಲಿಯೊಂದರಲ್ಲಿ ಹಂದಿಗಳ ಗುಂಪು ಸಂಚರಿಸುತ್ತಿರುವುದು.  
ಜಿಲ್ಲೆ

ಹಂದಿಗಳನ್ನು ನಗರದಿಂದ ಹೊರ ಸಾಗಿಸಲು ಸೂಚನೆ

ತುಮಕೂರು: ಪ್ಲೇಗ್, ಮಲೇರಿಯಾ, ಚಿಕನ್ ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆಯಿದ್ದು, ಮುಂಜಾಗ್ರತಾ ಕ್ರಮವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಬೀಡಾಡಿ ಹಂದಿಗಳನ್ನು ನಗರ ಪ್ರದೇಶದಿಂದ ಹೊರಸಾಗಿಸಬೇಕೆಂದು ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ಹಂದಿ ಸಾಕಾಣಿಕೆದಾರರಿಗೆ ಸೂಚನೆ ನೀಡಿದ್ದಾರೆ.

ನಗರ ವ್ಯಾಪ್ತಿಯಲ್ಲಿ ಬೀಡಾಡಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಬೀಡಾಡಿ ಹಂದಿಗಳು ಸಾರ್ವಜನಿಕವಾಗಿ ರಸ್ತೆ, ಖಾಲಿ ನಿವೇಶನ ಸೇರಿ ಎಲ್ಲೆಂದರಲ್ಲಿ ಓಡಾಡುತ್ತಿರುವುದರಿಂದ ನಗರದ ಅನೈರ್ಮಲ್ಯಗಳಿಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ 7 ದಿನಗಳ ಒಳಗಾಗಿ ಮಾಲೀಕರು, ಸಾಕಾಣಿಕೆದಾರರು ಬೀಡಾಡಿಯಾಗಿ ಓಡಾಡಿಕೊಂಡಿರುವ ತಮ್ಮ ಹಂದಿಗಳನ್ನು ಹಿಡಿದು ನಗರದ ಹೊರ ಪ್ರದೇಶಕ್ಕೆ ಸಾಗಿಸಬೇಕು. ಇಲ್ಲವಾದಲ್ಲಿ ಕುರಿ/ಕೋಳಿ ಸಾಕಾಣಿಕೆದಾರರು ನಿರ್ಮಿಸಿಕೊಂಡಿರುವ ಮಾದರಿಯಲ್ಲಿ ನಗರದ ಹೊರಗಡೆ ಫಾರ್ಮ್ ಹೌಸ್ ನಿರ್ಮಿಸಿಕೊಂಡು ಹಂದಿಗಳನ್ನು ಸಾಕಾಣಿಕೆ ಮಾಡಬೇಕಿದೆ.

ನಿಯಮ ಮೀರಿ ಹಂದಿಗಳು ರಸ್ತೆಗೆ ಬಂದಲ್ಲಿ ಸದರಿ ಹಂದಿಗಳನ್ನು ಪಾಲಿಕೆ ವತಿಯಿಂದ ಹಿಡಿದು ಹರಾಜು ಮಾಡಲು ಕ್ರಮವಹಿಸಲಾಗುವುದು ಇದರಿಂದಾಗುವ ಯಾವುದೇ ರೀತಿಯ ಕಷ್ಟ-ನಷ್ಟಗಳಿಗೆ ತುಮಕೂರು ಮಹಾನಗರಪಾಲಿಕೆ ಯು ಜವಾಬ್ದಾರಿಯಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.