ಜಿಲ್ಲೆ

ಖಾಸಗಿ ಟ್ಯೂಷನ್​ಗೆ ಅನುಮತಿ ಕಡ್ಡಾಯ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಕರ್ನಾಟಕ ಟುಟೋರಿಯಲ್​ ಇನ್ಸಿಟ್ಯೂಷನ್ಸ್​ ನಿಯಮಾವಳಿಯನ್ವಯ ಪ್ರಥಮ ಹಾಗೂ ದ್ವೀತಿಯ ಪಿಯು ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಖಾಸಗಿಯಾಗಿ ಟುಟೋರಿಯಲ್​ಗಳನ್ನು ನಡೆಸುವವರು ಕಡ್ಡಾಯವಾಗಿ ಪಿಯು ಶಿಕ್ಷಣ ಇಲಾಖೆ ಅನುಮತಿ ಪಡೆಯತಕ್ಕದ್ದು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಾಲಗುರುಮೂರ್ತಿ ತಿಳಿಸಿದ್ದಾರೆ.

ಅನುಮತಿ ಪಡೆಯದೆ ಟುಟೋರಿಯಲ್​ಗಳನ್ನು ನಡೆಸುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳ ಮೇಲೆ ಕಾನೂನು ಕ್ರಮವನ್ನು ಜರುಗಿಸಲಾಗುವುದು. ಈವರೆಗೂ ಅನುಮತಿ ಪಡೆಯದೇ ಇರುವ ಟುಟೋರಿಯಲ್​ಗಳು ಜೂನ್​ 25ರೊಳಗಾಗಿ ನೋಂದಣಿ ಮಾಡಿಸುವುದು ಕಡ್ಡಾಯ ಎಂದು ಸೂಚಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಡಿಡಿಪಿಯು ಕಚೇರಿ ಸಂಪರ್ಕಿಸಿ.