ತುಮಕೂರು: ತಿಪಟೂರು ತಾಲೂಕು ಮಸವಣಘಟ್ಟ ಪಿಡಿಒ ಪರಶುರಾಮ ಇ-ಸ್ವತ್ತು ಮಾಡಿಕೊಡಲು ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ನೊಣವಿನಕೆರೆ ಹೋಬಳಿ ರಾಜಶೆಟ್ಟಿಹಳ್ಳಿಯ ಎನ್.ಉಮೇಶ್ ಎಂಬುವವರ ಪಿತ್ರಾರ್ಜಿತ ಆಸ್ತಿಗೆ ಇಸ್ವತ್ತು ಮಾಡಿಕೊಂಡಲು ಪರಶುರಾಮ 11 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟು ಮುಂಗಡವಾಗಿ 5500ರೂ. ಪಡೆದಿದ್ದರು.
ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ಬಂದ ಹಿನ್ನೆಲೆಯಲ್ಲಿ ಗ್ರಾಪಂ ಕಚೇರಿಯಲ್ಲಿ ಗುರುವಾರ 5500ರೂ. ಲಂಚ ಸ್ವೀಕರಿಸುವಾಗ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ದಾಳಿ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಬಿ.ಉಮಾಶಂಕರ್, ರಾಮಕೃಷ್ಣ , ಇನ್ಸ್ಪೆಕ್ಟರ್ ಶಿವಪ್ರಸಾದ್‌ಮೇಟಿ, ಸಿಬ್ಬಂದಿಗಳಾದ ನಾಗರಾಜು, ರಾಘವೇಂದ್ರ, ಯತೀಗೌಡ, ರವಿ, ಭಾಸ್ಕರ, ನರಸಿಂಹರಾಜು ಇದ್ದರು.