ಜಿಲ್ಲೆ

ಅಹಿಂದ ಸಮಾವೇಶಕ್ಕೆ ಹೋಗುತ್ತೇನೆ, ತಪ್ಪೇನಿದೆ?: ಡಾ.ಜಿ.ಪರಮೇಶ್ವರ

ತುಮಕೂರು: ರಾಜ್ಯದಲ್ಲಿ ಅಹಿಂದ ಸಮಾವೇಶ ಆಯೋಜಿಸುತ್ತಿರುವ ಬಗ್ಗೆ ಕೇಳಿದ್ದೇನೆ ಆದರೆ, ಸಮಾವೇಶದ ಉದ್ದೇಶದ ಬಗ್ಗೆ ನನಗೆ ಗೊತ್ತಿಲ್ಲ. ನಾನು ರಾಜ್ಯ ಸರ್ಕಾರದ ಒಬ್ಬ ಪ್ರತಿನಿಧಿಯಾಗಿದ್ದು ಯಾರು ಕರೆದರೂ ಹೋಗುತ್ತೇನೆ, ಅದರಲ್ಲಿ ತಪ್ಪೇನಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ರಾಜ್ಯದಲ್ಲಿ ವರದಿ ಮಂಡನೆಯಾಗುವ ಮುಂಚೆಯೇ ಜಾತಿಗಣತಿಗೂ ಕೆಲವರು ವಿರೋಧ ಮಾಡುತ್ತಿದ್ದಾರೆ, ಇದು ಒಳ್ಳೆಯ ಬೆಳವಣಿಗೆ ಅಲ್ಲ. ವರದಿಯಲ್ಲಿ ಏನಿದೆ ಎಂಬುದೇ ಗೊತ್ತಿಲ್ಲವಲ್ಲ. ಯಾವ ಜಾತಿ ಎಷ್ಟಿದೆ, ಯಾವ ಜಾತಿ ಕಡಿಮೆ ಇದ್ದಾರೆ ಎಂಬ ಬಗ್ಗೆ ಯಾರೂ ಹೇಳಿಲ್ಲ ಎಂದರು.

170 ಕೋಟಿ ರೂ. ಖರ್ಚು ಮಾಡಿ ಸರ್ಕಾರ ಒಂದು ಸಮೀಕ್ಷೆ ಮಾಡಿಸಿದೆ. ಈ ಸಮೀಕ್ಷೆ ಹೊರಗಡೆ ಬಂದ ನಂತರವಷ್ಟೇ ಚರ್ಚೆ ನಡೆಯಬೇಕು. ಸಮೀಕ್ಷೆ ಬಂದಾಗ ಸರ್ಕಾರ ಯಾರು ಹಿಂದುಳಿದಿದ್ದಾರೆ ಅವರಿಗೆ ಡೇಟಾ ಹಾಗೂ ಮಾಹಿತಿಗಳ ಆಧಾರದ ಮೇಲೆ ಕಾರ್ಯಕ್ರಮ ರೂಪಿಸಬಹುದು ಎಂದರು.