ತುಮಕೂರು: ಸರ್ಕಾರ ಯುವನಿಧಿ ಯೋಜನೆ ಘೋಷಿಸಿ ನಿರುದ್ಯೋಗಿಗಳಿಗೆ ನೆರವು ನೀಡುತ್ತಿದೆ ಆದರೆ, ಸಕಾರಿ ಪದವಿ ಕಾಲೇಜುಗಳಲ್ಲಿ ತರಗತಿಗಳು ಸ್ಥಗಿತವಾಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಯನ್ನು ಡಾ.ಜಿ.ಪರಮೇಶ್ವರ ಲಘುವಾಗಿಯೇ ತೆಗೆದುಕೊಂಡು ಪ್ರತಿಕ್ರಿಯಿಸಿದರು.
ಅತಿಥಿ ಉಪನ್ಯಾಸಕರು ಹಿಂದಿನ ಸರ್ಕಾರವಿದ್ದಾಗಲೂ ಬೇಡಿಕೆ ಈಡೇರಿಕೆಗೆ ಧರಣಿ ನಡೆಸಿದ್ದರೂ ಈಗಲೂ ನಡೆಸುತ್ತಿದ್ದಾರೆ, ಸರ್ಕಾರದ ಬಜೆಟ್‌ನಲ್ಲಿ ಅವರಿಗೆ ನೆರವು ನೀಡುವ ಬಗ್ಗೆ ಯೋಚಿಸುತ್ತೇವೆ ಎಂದರು.
ಆದರೆ, ವಿದ್ಯಾರ್ಥಿಗಳು ತರಗತಿ ನಡೆಯದಿರುವ ಬಗೆಗಿನ ಪ್ರಶ್ನೆಗೆ ಆಯಾ ಪ್ರಾಚಾರ್ಯರಿಗೆ ತೊಂದರೆಯಾಗAತೆ ಕ್ರಮವಹಿಸಲು ಸೂಚನೆ ನೀಡಿz್ದೆÃವೆ ಎಂದು ಹೆಳಿದರು. ಆದರೆ, ಅತಿಥಿ ಉಪನ್ಯಾಸಕರಿಲ್ಲದೆ ಪ್ರಾಚಾರ್ಯರು ಅದ್ಯಾವ ಕ್ರಮವಹಿಸಬೇಕು ಎಂಬ ಪ್ರಶ್ನೆಗೆ ಉತ್ತರಿಸದೇ ಜಾರಿಕೊಂಡರು.