ಜಿಲ್ಲೆ

ದೇಶಪಾಡೆ ಸ್ಫೋಟಕ ಹೇಳಿಕೆ ಬಗ್ಗೆ ಪರಮೇಶ್ವರ್ ಹೇಳಿದ್ದೇನು?

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಎರಡೂವರೆ ವರ್ಷ ಸಿಎಂ ಸ್ಥಾನದ ಅಧಿಕಾರ ಹಂಚಿಕೆ ಭವಿಷ್ಯದ ಬಗ್ಗೆ ಕಾದುನೋಡೊಣ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಪ್ರತಿಕ್ರಿಯಿಸಿದರು.

ದಿಗ್ವಿಜಯ ನ್ಯೂಸ್ ಸಂದರ್ಶನದಲ್ಲಿ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ನೀಡಿರುವ ಹೇಳಿಕೆ ಬಗ್ಗೆ ನಗರದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೇಶಪಾಂಡೆ ಹಿರಿಯ ಶಾಸಕರು ಅವರ ಭವಿಷ್ಯ ಏನಾಗಲಿದೆ ಎಂಬುದನ್ನು ಕಾದುನೋಡಣ ಎಂದರು.

ನನಗೆ ಭವಿಷ್ಯ ಹೇಳಲು ಬರುವುದಿಲ್ಲ, ಬೇರೆ ಯಾರು ಭವಿಷ್ಯ ಹೇಳುತ್ತಾರೊ ನನಗೆ ಗೊತ್ತಿಲ್ಲ ಎಲ್ಲವನ್ನೂ ಕಾದುನೋಡೊಣ ಎಂದರು.