ಜಿಲ್ಲೆ

ಹನುಮಧ್ವಜ ಹಾರಿಸುವುದಕ್ಕೆ ತಕಾರಾರಿಲ್ಲ, ಸರ್ಕಾರಿ ಜಾಗದಲ್ಲಿ ಹಾರಿಸಿರುವುದು ಸರಿಯಲ್ಲ; ಗೃಹ ಸಚಿವ ಡಾ.‌ಜಿ.ಪರಮೇಶ್ವರ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.‌ಜಿ.ಪರಮೇಶ್ವರ, ರಾಷ್ಟ್ರೀಯ ಹಾರಿಸುವುದಾಗಿ ಅನುಮತಿ ಪಡೆದಿದ್ದರು.‌ ಹನುಮಧ್ವಜ ಹಾರಿದ್ದಾರೆ. ಇದಕ್ಕೆ ಅನುಮತಿ‌ ನೀಡಿರಲಿಲ್ಲ. ಹೀಗಾಗಿ, ಸರ್ಕಾರಿ ಜಾಗದಲ್ಲಿ ನಿರ್ಮಿಸಿ‌ ಅನುಮತಿ ನಿಯಮ ಉಲ್ಲಂಘಿಸಿರುವುದರಿಂದ ಪಂಚಾಯಿತಿಯವರು ತೆರವುಗೊಳಿಸಿದ್ದಾರೆ.‌ಲಘುಲಾಠಿ ಪ್ರಹಾರ ಮಾಡಿದ್ದಾರೆ ಎಂದರು.

ಸಮಾಜದಲ್ಲಿ ಶಾಂತಿ‌ ಕದಡುವ ಕೆಲಸ ವಾಗಬಾರದು. ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಬೇರೆಬೇರೆ ಕಡೆ ಹನುಮಧ್ವಜ ಹಾರಿಸುವುದಕ್ಕೆ ತಕಾರಾರಿಲ್ಲ.‌ ಸರ್ಕಾರಿ ಜಾಗದಲ್ಲಿ ಹಾರಿಸಿರುವುದು ಸರಿಯಲ್ಲ. ಸಾರ್ವಜನಿಕ ಜಾಗಗಳನ್ನು ಬಿಟ್ಟು ದೇವಸ್ಥಾನ ಸೇರಿದಂತೆ ಎಲ್ಲಿಯೇ ಹಾರಿಸಿದರು ತೊಂದರೆ ಇಲ್ಲ. ಶಾಂತಿ‌ ಕಾಪಾಡಬೇಕು ಎಂದರು.

ಕಾಂಗ್ರೆಸ್ ಹಿಂದೂ ವಿರೋಧಿ ಎಂಬ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪದೇಪದೇ ಹೇಳ್ತಾರೆ. ಅದಕ್ಕೆ ಹೆಚ್ಚು ಅರ್ಥ ಕಲ್ಪಿಸಬೇಕಿಲ್ಲ. ಕಾಂಗ್ರೆಸ್‌ನವರು ಹಿಂದೂ ವಿರೋದಿಗಳು ಎಂದು ಬಿಂಬಿಸಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ನಾವು ಹೇಳ್ತಿದ್ದೆವೆ ನಾವು ಹಿಂದೂಗಳೇ.‌ ನಾವು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ. ಇದನ್ನು ಮೀರುವುದು ಬೇಡ. ಕಾನೂನು ಮುರಿಯುವ ಕೆಲಸ ಮಾಡಬೇಡಿ ಎನ್ನುತ್ತಿದ್ದೇವೆ ಎಂದರು.

ಪ್ರತಿ ವಿಷಯವನ್ನು ರಾಜಕೀಯಕರಣಗೊಳಿಸಿ ಹೇಳಿಕೆ ನೀಡುವುದು ಸರಿಯಲ್ಲ.ರಾಷ್ಟ್ರಧ್ವಜ ಹಾರಿಸುವುದಾಗಿ ಅನುಮತಿ ಪಡೆದಿರುವುದು ಒಳ್ಳೆಯದೇ.‌ ಆದರೆ, ಅನುಮತಿಗೆ ವಿರುದ್ಧವಾಗಿ ಹನುಮಧ್ವಜ ಹಾರಿಸಿರುವುದು ಸರಿಯಲ್ಲ ಎಂದರು.

ರಾಜ್ಯಪಾಲರಿಂದ‌ ಕ್ಯಾಂಪಸ್ ಉದ್ಘಾಟನೆ:

ತುಮಕೂರು ವಿಶ್ವವಿದ್ಯಾನಿಲಯ ಹೊಸ ಕ್ಯಾಂಪಸ್ ಉದ್ಘಾಟನೆಗೆ ರಾಜ್ಯಪಾಲರು ಬರುವುದಾಗಿ ಹೇಳಿದ್ದಾರೆ. ಹೀಗಾಗಿ ಬೇರೊಂದು ದಿನ ನಿಗದಿ ಮಾಡಿ ಉದ್ಘಾಟಿಸಲಾಗುವುದು. ಈ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿಲ್ಲದಿರುವುದರಿಂದ ಕ್ಯಾಂಪಸ್ ಉದ್ಘಾಟಿಸುತ್ತಿಲ್ಲ ಎಂದರು.

ಕೆಎಸ್‌ಆರ್‌ಟಿಸಿ ಉದ್ಘಾಟನೆಗೆ ಇನ್ನೂ ತೀರ್ಮಾನವಾಗಿಲ್ಲ‌.‌ ಶೇ.90ರಷ್ಟು ಕೆಲಸವಾಗಿದ್ದು, ಸಣ್ಣಪುಟ್ಟ ಕೆಲಸ ಬಾಕಿ‌ ಇದೆ. ಮುಖ್ಯಮಂತ್ರಿಗಳು ಜಿಲ್ಲೆಗೆ ಪದೇಪದೇ ಆಗಮಿಸುವುದಿಲ್ಲ. ಹೀಗಾಗಿ ಇದೇ ಕಾರ್ಯಕ್ರಮದಲ್ಲಿ ಬಸ್ ನಿಲ್ದಾಣ ಉದ್ಘಾಟಿಸುವಂತೆ ಕಾರ್ಯಕರ್ತರು ಹಾಗೂ ಜಿಲ್ಲೆಯ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಬಸ್ ನಿಲ್ದಾಣಕ್ಕೆ ಹೋಗಿ ಉದ್ಘಾಟಿಸುವುದೋ ಅಥವಾ ವೇದಿಕೆಯಲ್ಲಿಯೇ ಉದ್ಘಾಟಿಸಬೇಕೆ ಎಂಬುದು ಇನ್ನು ಅಂತಿಮವಾಗಿಲ್ಲ ಎಂದರು.

ವರದಿ ಸ್ವೀಕರಿಸುವುದರಲ್ಲಿ ತಪ್ಪೇನಿಲ್ಲ:

ಜಾತಿಗಣತಿ ಸ್ವೀಕರಿಸುವುದಾಗಿ ಸಿಎಂ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಾವೆಲ್ಲ ಈಗಾಗಲೇ ಒತ್ತಾಯಿಸಿದ್ದೇವೆ. 168 ಕೋಟಿ ರೂ. ಖರ್ಚು ಮಾಡಿ ಜಾತಿಗಣತಿ ವರದಿ ಸ್ವೀಕರಿಸದಿದ್ದರೆ ಹೇಗೆ. ವರದಿ ಸ್ವೀಕರಿಸಿದ ನಂತರ ಚರ್ಚೆ, ವಿಶ್ಲೇಷಣೆ ನಡೆಯಬೇಕು. ವರದಿಯನ್ನೇ ತೆಗೆದುಕೊಳ್ಳುವುದಿಲ್ಲ ಎಂದು ಹೇಳಲಾಗುವುದಿಲ್ಲ. ಇದನ್ನೆ ಸಿಎಂ ಹೇಳಿದ್ದಾರೆ.

ಬರಪರಿಹಾರ ನೀಡದ ಕೇಂದ್ರದ ವಿರುದ್ಧ ಆಕ್ರೋಶ:

ವಿಪಕ್ಷ ನಾಯಕ ಬರ ಪರಿಹಾರದ ಕುರಿತು ರಾಜ್ಯ ಸರ್ಕಾರದ ವಿರುದ್ಧ ಕೋಲಾರದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಹೋರಾಟ ಮಾಡಲಿ. ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ಅನುಧಾನದಲ್ಲಿ ರಾಜ್ಯಕ್ಕೆ ಒಂದು ರೂಪಾಯಿ ನೀಡಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾದರೆ ಬಹಳ ಸಂತೋಷ ಎಂದರು.

ರಾಜ್ಯದಲ್ಲಿ 17 ಸಾವಿರ ಕೋಟಿ ರೂ. ಬರ ಪರಿಹಾರದ ನಷ್ಟ ಈವರೆಗೆ ಕೊಟ್ಟಿಲ್ಲ.‌ ಎನ್‌ಡಿಆರ್‌ಎಫ್‌ನಿಂದ ದುಡ್ಡು ಕೊಡಿಸಲಿ. ಸಭೆ ಕರೆಯುವುದಾಗಿ ಹೇಳಿದ ಕೇಂದ್ರ ಸಚಿವರು ಸಭೆಯನ್ನೂ ಕರೆದಿಲ್ಲ. ರಾಜ್ಯ ಸರ್ಕಾರಕ್ಕೆ ಒಂದು ರೂಪಾಯಿನು ಬಂದಿಲ್ಲ.‌ ಯಾರ ವಿರುದ್ಧ ಹೋರಾಟ ಮಾಡುತ್ತಾರೆ. ನಾವು ಜನರ ಮುಂದೆ ಹೋಗುತ್ತೇವೆ.‌ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಾಡುತ್ತಿರುವ ಮಲತಾಯಿ ದೋರಣೆ ಎತ್ತಿಹಿಡಿಯುತ್ತೇವೆ ಎಂದರು.