ಜಿಲ್ಲೆ

ಜನರ ಪ್ರಶ್ನೆಗಳಿಗೆ ಅಧಿಕಾರಿಗಳು ನಿರುತ್ತರ; ಜಿಲ್ಲಾಡಳಿತದ ಕಾರ್ಯವೈಖರಿಗೆ ಪರಮೇಶ್ವರ ಗರಂ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಕುಣಿಗಲ್ ತಾಲೂಕು ಹುಲಿಯೂರುದುರ್ಗದಲ್ಲಿ ನಡೆಯುತ್ತಿರುವ ಜನತಾದರ್ಶನದಲ್ಲಿ ಜನರಿಂದ ಎದುರಾದ ಸಮಸ್ಯೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರಗೆ ಇರಿಸುಮುರಿಸು ತಂದಿದೆ.

ಕೃಷಿ, ಕಂದಾಯ, ತೋಟಗಾರಿಕೆ, ಅಬಕಾರಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬAಧಿಸಿದ ಸಮಸ್ಯೆಗಳ ಬಗ್ಗೆ ಜನರು ಕೇಳುತ್ತಿರುವ ಪ್ರಶ್ನೆಗಳಿಗೆ ಜಿಲ್ಲಾಡಳಿತದಿಂದ ಮೌನವೇ ಉತ್ತರವಾಗಿದೆ.

ಸೂಕ್ತ ಅಂಕಿ, ಅಂಶಗಳಿಲ್ಲದೆ ಜನತಾದರ್ಶನದಲ್ಲಿ ಭಾಗವಹಿಸಿರುವ ಅಧಿಕಾರಿಗಳ ಕಾರ್ಯವೈಖರಿಗೆ ಖುದ್ದು ಡಾ.ಜಿ.ಪರಮೇಶ್ವರಗೆ ಬೇಸರ ತರಿಸಿದ್ದು ಪೂರ್ವತಯಾರಿ ಇಲ್ಲದೆ ಬಂದಿರುವ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.

ತಹಸೀಲ್ದಾರ್ ವಿಶ್ವನಾಥ್ ಹಾಗೂ ಇಒ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ಗೆ ಸೂಚಿಸಿದರು.