ಜಿಲ್ಲೆ

ಮಹಾನಗರ ಪಾಲಿಕೆ `ತ್ವರಿತ ಸೇವೆ ಅಭಿಯಾನ'ಕ್ಕೆ ಜನಸ್ಪಂದನೆ; 698 ಅಹವಾಲು, 347ಕ್ಕೆ ಸ್ಥಳದಲ್ಲಿಯೇ ಪರಿಹಾರ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ತುಮಕೂರು ನಗರವಾಸಿಗಳ ಸಾಕಷ್ಟು ವರ್ಷಗಳ ಸಮಸ್ಯೆಗಳಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ತುಮಕೂರು ಮಹಾನಗರ ಪಾಲಿಕೆ ದಿಟ್ಟ ಹೆಜ್ಜೆ ಇಟ್ಟಿದೆ.

ಜನರಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ `ತ್ವರಿತ ಸೇವೆ ಅಭಿಯಾನ' ಆರಂಭಿಸಿದ್ದು ಪ್ರತಿ ತಿಂಗಳು 2 ಹಾಗೂ 4ನೇ ಶನಿವಾರ ಈ ಸೇವೆ ಜನರಿಗೆ ಲಭ್ಯವಾಗಲಿದೆ.

ವಿವಿಧ ಸೇವೆಗಳನ್ನು ತ ್ವರಿತವಾಗಿ ಒದಗಿಸಲು ಆಯೋಜಿಸಿದ್ದ `ತ್ವರಿತ ಸೇವೆ ಅಭಿಯಾನ'ದಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಸರತಿಯಲ್ಲಿ ನಿಂತು ನೂರಾರು ಜನರು ಅಹವಾಲು ಸಲ್ಲಿಸಿದರು.

ಸಾರ್ವಜನಿಕರಿಂದ ಕಂದಾಯ, ನೀರು ಸರಬರಾಜು, ಯುಜಿಡಿ, ಚುನಾವಣೆ, ಉದ್ದಿಮೆ ಪರವಾನಿಗೆ, ಜನನ ಮತ್ತು ಮರಣ ಶಾಖೆಗಳಿಗೆ ಸಂಬAಧಪಟ್ಟ 698 ಅಹವಾಲುಗಳು ಸಲ್ಲಿಕೆಯಾದವು, ಖುದ್ದು ಆಯುಕ್ತೆ ಅಶ್ವಿಜಾ ಮುಂದೆ ನಿಂತು ಸಾಧ್ಯವಿದ್ದ 347 ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿದರು. ಉಳಿದ 351 ಅರ್ಜಿಗಳನ್ನು ಪರಿಶೀಲಿಸಿ ಏಳು ದಿನಗಳಲ್ಲಿ ಪರಿಹರಿಸುವ ಭರವಸೆ ನೀಡಲಾಯಿತು.

ಮೇಯರ್ ಪ್ರಭಾವತಿ, ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಸದಸ್ಯರಾದ ರಮೇಶ್, ಮಲ್ಲಿಕಾರ್ಜುನ್, ಧರಣೇಂದ್ರಕುಮಾರ್ ಮತ್ತಿತರು ಇದ್ದರು.