ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಗಳ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದ್ದು, ಒಣ ಶೌಚಾಲಯಗಳನ್ನು ಸ್ವಚ್ಛಗೊಳಿಸುವ, ಅನೈರ್ಮಲ್ಯ ಶೌಚಾಲಯಗಳಿಂದ ಹೊರಹೋಗಿ ತೆರೆದ ಚರಂಡಿಯಲ್ಲಿ ಸಂಗ್ರಹವಾಗುವ ಮಾನವ ಮಲವನ್ನು ಸ್ವಚ್ಛಗೊಳಿಸುವ, ಶೌಚಾಲಯದ ಮಲಗುಂಡಿಗಳನ್ನು ದೈಹಿಕವಾಗಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವ ಯಾವುದೇ ವ್ಯಕ್ತಿಗಳು ನ.15ರೊಳಗಾಗಿ ಹೆಸರು
ನೋಂದಾಯಿಸಿಕೊಳ್ಳಬೇಕು.
ಅರ್ಹ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಗಳು ನೋಂದಣಿಗಾಗಿ ತಮ್ಮ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಕುಟುಂಬದ ಸದಸ್ಯರನ್ನೊಳಗೊಂಡ ಭಾವಚಿತ್ರ, ಬ್ಯಾಂಕ್ ಖಾತೆಯ ಪಾಸ್ಬುಕ್, ಆಧಾರ್ ಪ್ರತಿ, ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಕಾರ್ಯನಿರ್ವಹಿಸುತ್ತಿರುವ ಅನೈರ್ಮಲ್ಯ ಶೌಚಾಲಯ ಸ್ಥಳದ ವಿವರ, ಮತ್ತಿತರ ಅಗತ್ಯ ದಾಖಲೆಗಳನ್ನು ಮಹಾನಗರಪಾಲಿಕೆಯ ಒಳಚರಂಡಿ ಶಾಖೆ ಸಂಪರ್ಕಿಸಬಹುದು.