ಜಿಲ್ಲೆ

ಅನಕ್ಷರಸ್ಥ ಪಾಲಿಕೆ ಪೌರ ಕಾರ್ಮಿಕರಿಗೆ ಅಕ್ಷರ ಅರಿವು

ತುಮಕೂರು: ಅನಕ್ಷರಸ್ಥ ಪೌರ ಕಾರ್ಮಿಕರಿಗೆ ಅಕ್ಷರ ಕಲಿಸುವ ಸಾಕ್ಷರ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಚಾಲನೆ ನೀಡಿದೆ.

ಅಕ್ಷರ ಯಜ್ಞಕ್ಕೆ ಜಿಪಂ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಸಹಯೋಗ ನೀಡಿದ್ದು ಕಲಿಕಾರ್ಥಿ ಪೌರ ಕಾರ್ಮಿಕರಿಗೆ ಲೇಖನ, ಕಲಿಕಾ ಸಾಮಗ್ರಿ ಹಾಗೂ ಪುಸ್ತಕಗಳನ್ನು ಗುರುವಾರ ವಿತರಿಸಲಾಯಿತು.

ಅನಕ್ಷರಸ್ಥ ಪೌರ ಕಾರ್ಮಿಕರಿಗೆ ಲೇಖನ ಸಾಮಗ್ರಿ ಹಾಗೂ ಪುಸ್ತಕಗಳನ್ನು ವಿತರಿಸಿದ ಮೇಯರ್ ಎಂ.ಪ್ರಭಾವತಿ ಮಾತನಾಡಿದರು.
ವಿಪಕ್ಷ ನಾಯಕ ವಿಷ್ಣುವರ್ಧನ್, ಪಾಲಿಕೆ ಸದಸ್ಯ ಇನಾಯತ್ ಉಲ್ಲಾಖಾನ್, ಜೆ. ಕುಮಾರ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಚ್.ಡಿ.ಲಕ್ಷ್ಮಿಜನಾರ್ಧನ, ಪಾಲಿಕೆ ಪಾಲಿಕೆ ಅಭಿಯಂತರ ಪೂರ್ಣಿಮಾ, ಆರೋಗ್ಯಾಧಿಕಾರಿ ಡಾ. ಮದಕರಿನಾಯಕ, ಪಾಲಿಕೆ ನೌಕರ ಕದಿರಪ್ಪ ಮತ್ತಿತರರು ಇದ್ದರು.