ತುಮಕೂರು: ತಿಪಟೂರು ತಾಲ್ಲೂಕು ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಕೃಷಿಯಲ್ಲಿ ತೊಡಗಿರುವ ನಿವೃತ್ತ ಸೈನಿಕರಿಗೆ 2 ದಿನದ ಸಾವಯವ ಕೃಷಿ ಹಾಗೂ ಸಾವಯವ ಕೃಷಿ ಪರಿಕರಗಳ ತಯಾರಿಕೆ(ಪಂಚಗವ್ಯ, ಜೀವಾಮೃತ, ಎರೆಹುಳು ಗೊಬ್ಬರ ತಯಾರಿಕೆ, ಜೈವಿಕ ಪೀಡೆನಾಶಕ ಹಾಗೂ ಜೈವಿಕ ಗೊಬ್ಬರ) ಕುರಿತು ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ಅಕ್ಟೋಬರ್ ಮೊದಲನೇ ವಾರದಲ್ಲಿ ಹಮ್ಮಿಕೊಳ್ಳಲಾಗಿದೆ.
ತರಬೇತಿಯು ತಿಪಟೂರು ತಾಲ್ಲೂಕು ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದ್ದು ಆಸಕ್ತರರು ಸೆಪ್ಟೆಂಬರ್ 25ರೊಳಗೆ ಕೆ.ವಿ.ಕೆ. ವಿಜ್ಞಾನಿಗಳಿಗೆ ದೂರವಾಣಿ ಕರೆ 7259200919 ಮಾಡಿ ನೋಂದಾಯಿಸಿಕೊಳ್ಳಬಹುದು. ತರಬೇತಿ ಸಂದರ್ಭದಲ್ಲಿ ಕೇಂದ್ರದ ವತಿಯಿಂದ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗುವುದು.