ತುಮಕೂರು: ಬಿಜೆಪಿ ತುಮಕೂರು ನಗರ ಮಂಡಲದ ವಿವಿಧ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಕೆ.ಎಸ್.ಕುಮಾರ್, ರಾಧಾ ಗಂಗಾಧರ್, ಜಿ.ಗಂಗಾಧರ್, ನರಸಿಂಹಸ್ವಾಮಿ, ಬಂಬೂ ಮೋಹನ್, ರೇಖಾ, ಪ್ರಧಾನ ಕಾರ್ಯದರ್ಶಿಗಳಾಗಿ ಎಚ್.ಎನ್.ವಿರೂಪಾಕ್ಷಪ್ಪ,
ಎಚ್.ಹನುಮಂತರಾಜು ನೇಮಕವಾಗಿದ್ದಾರೆ.
ಕಾರ್ಯದರ್ಶಿಗಳಾಗಿ ಆದ್ಯಾ, ನಾಗೇಂದ್ರ, ಸಿದ್ದೇಶ್ಪ್ರಸಾದ್, ಎಚ್.ಕೆ.ರಮೇಶ್, ಭಾಗ್ಯಮ್ಮ, ಪಿ.ಎಂ.ಪವಿತ್ರ, ಖಜಾಂಚಿಯಾಗಿ ಅಕ್ಷಯ್ ಚೌಧರಿ ಅವರನ್ನು ನಗರ ಮಂಡಲ ಅಧ್ಯಕ್ಷ ಟಿ.ಕೆ.ಧನುಷ್ ನೇಮಕ ಮಾಡಿದ್ದಾರೆ.
ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಬಿ.ಎಚ್.ವಸಂತ, ಪ್ರಧಾನ ಕಾರ್ಯದರ್ಶಿ ಮಂಜುಳಾ, ಕೆ.ಜೆ.ನಾಗರತ್ನ ಹಾಗೂ ಯುವ ಮೋರ್ಚಾ ಅಧ್ಯಕ್ಷ ಪ್ರೀತಂ ಜೈನ್, ಪ್ರಧಾನ ಕಾರ್ಯದರ್ಶಿಗಳಾಗಿ ಗಂಗೇಶ್ಗೌಡ, ಬಿ.ಎಂ.ಪ್ರವಿಣ್, ಎಸ್.ಸಿ.ಮೋರ್ಚಾ ಅಧ್ಯಕ್ಷ ಕೆ.ಎನ್.ನಾಗರಾಜು, ಪ್ರಧಾನ ಕಾರ್ಯದರ್ಶಿಗಳಾಗಿ ಕೆ.ವಿ.ಜಗದೀಶ್, ಎಸ್.ಶಿವರಾಜು ಅವರನ್ನು ನೇಮಕ ಮಾಡಲಾಗಿದೆ.
ಎಸ್.ಟಿ. ಮೋರ್ಚಾ ಅಧ್ಯಕ್ಷ ಟಿ.ಆರ್.ರಾಕೇಶ್, ಪ್ರಧಾನ ಕಾರ್ಯದರ್ಶಿಗಳಾಗಿ ಆರ್.ಅಮಿತ್, ಎಂ.ಎಸ್.ಸಿದ್ಧರಾಜು, ಒಬಿಸಿ ಮೋರ್ಚಾ ಅಧ್ಯಕ್ಷ ಟಿ.ಆರ್.ಭರತ್, ಪ್ರಧಾನ ಕಾರ್ಯದರ್ಶಿಗಳಾಗಿ ರಮೇಶ್, ಎಸ್.ದೇವರಾಜ್, ರೈತ ಮೋರ್ಚಾ ಅಧ್ಯಕ್ಷ ಎ.ರವೀಶ್, ಪ್ರಧಾನ ಕಾರ್ಯದರ್ಶಿಗಳಾಗಿ ಟಿ.ಎಸ್.ಲೋಕೇಶ್, ಆರ್.ಶಿವಕುಮಾರ್, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಎಸ್.ಜೆ.ನಾಗರಾಜು, ಪ್ರಧಾನ ಕಾರ್ಯದರ್ಶಿಗಳಾಗಿ ಎಸ್.ದೀಪಕ್, ಶೋಯಬ್ ಇಮ್ರಾನ್ ನೇಮಕವಾಗಿದ್ದಾರೆ.