ಜಿಲ್ಲೆ

ತುಮಕೂರು ವಿವಿಯಿಂದ ನಹಿದಾ ಜಮ್‌ಜಮ್ ವರ್ಗಾವಣೆ

ತುಮಕೂರು: ತುಮಕೂರು ವಿವಿ ಕುಲಸಚಿವ ನಹಿದಾ ಜಮ್‌ಜಮ್ ಅವರನ್ನು ಮಂಡ್ಯ ಜಿಲ್ಲೆ ಮಳವಳ್ಳಿ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಗೆ ವರ್ಗಾಹಿಸಲಾಗಿದ್ದು ಅವರ ಸ್ಥಾನಕ್ಕೆ ಹಾಸಲ ಹೇಮಾವತಿ ಜಲಾಶಯ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಯಲ್ಲಿರುವ ವಿ.ಮಂಜುನಾಥ್ ಅವರನ್ನು ವರ್ಗಾಹಿಸಿ ಸರ್ಕಾರ ಆದೇಶಿಸಿದೆ.

ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಅಧಿಕಾರಿಗಳನ್ನು ವರ್ಗಾಹಿಸಲಾಗಿದ್ದು ತುಮಕೂರು ಜಿಲ್ಲೆಯವರೇ ಆದ ನಹಿದಾ ಜಮ್‌ಜಮ್ ಅವರನ್ನು ವರ್ಗಾಹಿಸಲಾಗಿದೆ.