ತುಮಕೂರು: ಜೆಡಿಎಸ್ ಜತೆ ಮೈತ್ರಿಗೆ ನಮ್ಮ ಪಕ್ಷದ ಹೈಕಮಾಂಡ್ ಒಪ್ಪಿರುವ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ ಆದರೆ, ಹೇಮಾವತಿ ನೀರು ಬಿಡಲು ಅಡ್ಡಿಯಾಗಿದ್ದ ದೇವೇಗೌಡರು ತುಮಕೂರಿನಿಂದ ಸ್ಫರ್ಧಿಸಿದರೆ ಜನರು ಮತ ನೀಡುವುದಿಲ್ಲ. ಅವರಿಗೆ ಮತ ನೀಡಿದರೆ ಜಿಲ್ಲೆಯ ಜನತೆ ಪಾಪ ಮಾಡಿದಂತೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿರುವುದು ಅಚ್ಚರಿ ಮೂಡಿಸಿದೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೇಮಾವತಿ ನೀರಿನ ವಿಷಯದಲ್ಲಿ ದೇವೇಗೌಡರು ತುಮಕೂರಿಗೆ ಎಂದೂ ಕಂಡಿರಿಯದ ಮೋಸ ಮಾಡಿz್ದÁರೆ. ಯಾರಿಗಾದರೂ ಮತ ಹಾಕಲಿ ಆದರೆ, ದೇವೇಗೌಡರಿಗೆ ಮಾತ್ರ ಮತ ಹಾಕಬಾರದು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ಜೆಡಿಎಸ್‌ನವರು ತುಮಕೂರು ಸೇರಿ ಐದು ಸೀಟು ಕೇಳಿದ್ದಾರಂತೆ, ಇಲ್ಲಿನ ಜನರು ಓಟು ಹಾಕ್ತಾರೊ, ಇಲ್ವೊ ಅವರಿಗೆ ಗೊತ್ತಿಲ್ಲವೇ? ಮತ್ತೊಮ್ಮೆ ತುಮಕೂರಿನಿಂದ ದೇವೇಗೌಡರನ್ನು ನಿಲ್ಲಿಸಲು ಹೊರಟಿದ್ದಾರಂತೆ, ಅವರು ನಿಂತರೂ ಜನ ಓಟು ಹಾಕೊಲ್ಲ. ರಕ್ತ ಕೊಟ್ಟರೂ ಕೊಟ್ಟೆನೂ, ತುಮಕೂರಿಗೆ ಹೇಮಾವತಿ ನೀರು ಕೊಡಲ್ಲ ಎಂದಿದ್ದ ದೇವೇಗೌಡರಿಗೆ ಒಮ್ಮೆ ತುಮಕೂರಿನ ಜನ ಸೋಲು ತೋರಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ದೇವೇಗೌಡರಿಗೆ ಅವರ ನೆಂಟರೂ ಓಟು ಹಾಕುವುದಿಲ್ಲ, ಒಬ್ಬ ಗೌಡರೂ ಅವರಿಗೆ ಮತ ಹಾಕಲ್ಲ. ನಮ್ಮ ಜತೆ ಹಿಂದೊಮ್ಮೆ ಮೈತ್ರಿಯಾಗಿ 39 ಸೀಟು ಪಡೆದು ನಂತರ ಕಾಂಗ್ರೆಸ್ ಜತೆ ಹೋಗಿ ಕುಮಾರಸ್ವಾಮಿ ಸಿಎಂ ಆದರು ಎಂದು ಟೀಕಿಸಿದರು.