ಜಿಲ್ಲೆ

ಲೋಕಸಭೆಗೆ ಹೋಗಬೇಕೆಂಬ ಆಸೆ ನನಗೂ ಇದೆ, ಟಿಕೆಟ್ ಕೇಳಿದ್ದೇನೆ: ಕೆ.ಎನ್.ರಾಜಣ್ಣ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ನನ್ನ ರಾಜಕೀಯ ಜೀವನದಲ್ಲಿ ದೇಶದ ಸಂಸತ್‌ನಲ್ಲಿ ಪ್ರತಿನಿಧಿಸಬೇಕು ಎಂಬ ಆಸೆಯಿದೆ ಹಾಗಾಗಿ, ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಕೇಳಿದ್ದೇನೆ ಎಂದು ತುಮಕೂರು ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಕೆ.ಎನ್.ರಾಜಣ್ಣ ನಗುತ್ತಲೇ ಉತ್ತರಿಸಿದರು.

ಹೈಕಮಾಂಡ್ ಒಪ್ಪಿ ಟಿಕೆಟ್ ನೀಡದರೆ ಸ್ಪರ್ಧಿಸುತ್ತೇನೆ, ಮುದ್ದಹನುಮೇಗೌಡ ಕಾಂಗ್ರೆಸ್‌ಗೆ ಬರುವ ಬಗ್ಗೆ ನನ್ನ ಬಳಿಯೂ ಕೆಲವರು ಚರ್ಚೆ ನಡೆಸಿದ್ದಾರೆ. ಹಾಗೆಯೇ ಡಾ.ಜಿ.ಪರಮೇಶ್ವರ್ ಹತ್ತಿರವೂ ಕೆಲವರು ಪ್ರಾಸ್ತಾಪಿಸಿದ್ದಾರೆ ಎಂದು ಹೇಳಿದರು.

ಒಂದೇ ಮನೆಯಲ್ಲಿ ನಾನು ಎಂಎಲ್‌ಎ ಆಗಿದ್ದೇನೆ ನನ್ನ ಮಗ ಎಂಎಲ್‌ಸಿ ಆಗಿದ್ದಾನೆ ಆಗೆ ಆಗಬಾರದು. ದ್ವನಿ ಇಲ್ಲದ ಸಮುದಾಯಗಳ ಕಥೆ ಏನು?.ಸಣ್ಣ ಪುಟ್ಟ ಸಮುದಾಯಗಳಿಗೆ ಅಧಿಕಾರ ಸಿಕ್ಕರೆ ಮಾತ್ರ ಸಾಮಾಜಿಕ ನ್ಯಾಯಕ್ಕೆ ಒಂದು ಬೆಲೆ ಇಲ್ಲದಿದ್ದರೆ ಅದು ಪುಸ್ತಕಕ್ಕೆ ಮಾತ್ರ ಸೀಮಿತವಾಗಲಿದೆ ಎಂದರು.