ಜಿಲ್ಲೆ

ಆಧುನಿಕ ಹೈನುಗಾರಿಕೆ ತರಬೇತಿ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಪಶುಪಾಲನಾ ಮತ್ತು ಪಶುವೈದ್ಯಕಿಯ ತರಬೇತಿ ಕೇಂದ್ರ ರೈತರಿಗೆ ಉಚಿತವಾಗಿ ಆಧುನಿಕ ಹೈನುಗಾರಿಕೆ ತರಬೇತಿ ನೀಡಲು ಉದ್ದೇಶಿಸಿದೆ.


ಆಧುನಿಕ ಹೈನುಗಾರಿಕೆ ತರಬೇತಿ ಸೆ.25 ಮತ್ತು 26ರಂದು ನಡೆಯಲಿದ್ದು ಆಸಕ್ತರು ಆಯಾ ದಿನಾಂಕದಂದು ಬೆಳಗ್ಗೆ 10ಕ್ಕೆ ತರಬೇತಿಗೆ ನೇರವಾಗಿ ಹಾಜರಾಗಬಹುದು.


ತರಬೇತಿಗೆ ಆಗಮಿಸುವವರು ಇತ್ತೀಚಿನ 2 ಪಾಸ್​ಪೋರ್ಟ್​ ಅಳತೆ ಭಾವಚಿತ್ರ, ರೈತರ ಫ್ರೂಟ್​ ಐಡಿ ಸಂಖ್ಯೆ, ಆಧಾರ್​ ಕಾರ್ಡ್​, ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತರಬೇಕು. ಮಾಹಿತಿಗೆ ಹತ್ತಿರದ ಪಶು ವೈದ್ಯಕಿಯ ಆಸ್ಪತ್ರೆ ಅಥವಾ ದೂ.0816-2251214 ಸಂಪರ್ಕಿಸಿ.