ತುಮಕೂರು: ತುಮಕೂರು ವಿವಿ ಅಂತರಕಾಲೇಜು ಕಬ್ಬಡಿ ಪಂದ್ಯಾವಳಿಗೆ ತಿಪಟೂರಿನಲ್ಲಿ ಶಾಸಕ ಕೆ.ಷಡಕ್ಷರಿ ಚಾಲನೆ ನೀಡಿದರು. ಮೈದಾನದಲ್ಲಿ ರೈಡರ್ ಆಗಿದ್ದ ಶಾಸಕರು ಕಬ್ಬಡಿ ಕಬ್ಬಡಿ ಎಂದು ತೊಡೆತಟ್ಟಿದಾಗ ನೆರೆದಿದ್ದ ವಿದ್ಯಾರ್ಥಿಗಳು ಶಿಳ್ಳೆ, ಚಪ್ಪಾಳೆ ಮೊಳಗಿಸಿದರು.
ತಿಪಟೂರು ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ಆರಂಭವಾದ ಪಂದ್ಯಾವಳಿಯಲ್ಲಿ ರೈಡಿಂಗ್ ಮಾಡಿದ ಶಾಸಕರು ಮೊದಲ ಪ್ರಯತ್ನದಲ್ಲಿಯೇ ಒಂದು ಅಂಕ ಪಡೆದರು.