ಜಿಲ್ಲೆ

ವಿದ್ಯಾರ್ಥಿಗಳ ಸಂಘದ 22ನೇ ವರ್ಷದ ಸರ್ವಸದಸ್ಯರ ಸಭೆ

ತುಮಕೂರು: ನಗರದ ಶ್ರೀಸಿದ್ಧಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಭಾನುವಾರ ಹಿರಿಯ ವಿದ್ಯಾರ್ಥಿಗಳ ಸಂಘದ 22ನೇ ವರ್ಷದ ಸರ್ವಸದಸ್ಯರ ಮಹಾಸಭೆ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಆರ್​.ಎ.ಪೀರ್​ಸಾಬ್​ ಗೋಲ್​, ಹಿರಿಯ ವಿದ್ಯಾರ್ಥಿಗಳ ಸಂಘ ಕಳೆದ 21 ವರ್ಷಗಳಿಂದ ಉತ್ತಮ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ, ಎಲ್ಲರೂ ಸೇವಾಮನೋಭಾವ ಬೆಳೆಸಿಕೊಳ್ಳಬೇಕು ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳು ಹೊಂದಿಕೊಳ್ಳಬೇಕು, ಚಿಕ್ಕ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ಸಾಧನೆ ಮಾಡಬೇಕು ಇದರಿಂದ ಹೆತ್ತವರಿಗೂ ಶಿಕ್ಷಕರಿಗೂ ಹೆಸರು ಬರುವಂತೆ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಡಾ.ಎಸ್​.ಕೆ.ನಂದೀಶಯ್ಯ ಮಾತನಾಡಿ, ಈ ಕಾಲೇಜಿನಲ್ಲಿ ನುರಿತ ಅನುಭವಿ ಉಪನ್ಯಾಸಕರು ಇರುವುದರಿಂದ ಪ್ರತಿವರ್ಷ ಹತ್ತಾರು ರ್ಯಾಂಕ್​ಗಳು ಬರುತ್ತಿವೆ, ಇಲ್ಲಿ ಓದಿರುವ ಅಸಂಖ್ಯಾತ ವಿದ್ಯಾರ್ಥಿಗಳು ದೇಶದ ಮೂಲೆ ಮೂಲೆಗಳಲ್ಲಿ ಇದ್ದಾರೆ, ಕಾಲೇಜಿನ ಕೊಡುಗೆ ಸಮಾಜಕ್ಕೆ ಅಪಾರ, ಕಾಲೇಜು ನಮಗೆ ಕೇವಲ ಶಿಕ್ಷಣವನ್ನು ನೀಡಿಲ್ಲ ಬದುಕುವ ಕಲೆಯನ್ನು ಉತ್ತಮ ಸಂಸ್ಕಾರವನ್ನು ನೀಡಿದೆ, ಮಾರ್ಗದರ್ಶನ ನೀಡಿದೆ, ಅನ್ನದ ಮಾರ್ಗ ನೀಡಿ ಆಶೀರ್ವದಿಸಿದೆ ಎಂದರು.

ವೇದಿಕೆಯಲ್ಲಿ ಡಾ.ಪ್ರಸನ್ನ, ವಿಜಯ್​, ಆರ್​.ಬಸವರಾಜಪ್ಪ, ಪ್ರೊ.ಲಿಂಗದೇವರಪ್ಪ, ಜಿ.ಎಂ.ದಿನೇಶ್​, ಪ್ರೊ.ಚೇತನ್​ಕುಮಾರ್​, ಆರ್​.ಎಸ್​, ಬಿ.ಎಸ್​ಆಶಾರಾಣಿ, ಸೂರ್ಯನಾರಾಯಣಗುಪ್ತ, ಪ್ರೊ.ಕೆ.ಟಿ.ಮಂಜುನಾಥ್​, ಪ್ರೊ.ದಕ್ಷಿಣಾಮೂರ್ತಿ, ಪ್ರೊ.ಡಿ.ಆರ್​.ಮೋಹನ್​ ಕುಮಾರ್​, ಹೆಚ್​.ಆರ್​.ನಾಗೇಶ್​, ಹೆಚ್​.ಪ್ರಸನ್ನಕುಮಾರ್​, ಜಿ.ಷಡಾಕ್ಷರಯ್ಯ, ಶ್ರೀಮತಿ ಇಂದ್ರಾಣಿ, ಪ್ರೊ.ಮಧು.ಎಸ್​.ಕುಮಾರ್​, ಡಾ.ಕಿಶೋರ್​ ಮತ್ತಿತರರು ಇದ್ದರು.