ತುಮಕೂರು: ತೋಟಗಾರಿಕೆ ಇಲಾಖೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಜ.27ರಂದು ಬೆಳಗ್ಗೆ 10ಕ್ಕೆ ನಗರದ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ "ಜಿಲ್ಲಾ ಮಟ್ಟದ ಮಾವು, ಬಾಳೆ ಬೆಳೆಗಳ ವಿಚಾರ ಸಂಕಿರಣ ಹಾಗೂ ತರಬೇತಿ' ಕಾರ್ಯಕ್ರಮ ಏರ್ಪಡಿಸಿದೆ.
ವಿಚಾರ ಸಂಕಿರಣದಲ್ಲಿ ಮಾವು ಬೆಳೆಯ ಸಮಗ್ರ ಬೇಸಾಯ ತಾಂತ್ರಿಕ ಪದ್ಧತಿ, ಮಾವು ಬೆಳೆಯ ಸಮಗ್ರ ಕೀಟ ಮತ್ತು ರೋಗಗಳ ನಿರ್ವಹಣೆ, ಬಾಳೆ ಬೆಳೆಯ ಸಮಗ್ರ ಬೇಸಾಯ ತಾಂತ್ರಿಕ ಪದ್ಧತಿ, ಬಾಳೆ ಬೆಳೆಯ ಸಮಗ್ರ ಕೀಟ ಮತ್ತು ರೋಗಗಳ ನಿರ್ವಹಣೆ, ಹಣ್ಣುಗಳ ತಾಂತ್ರಿಕ ಬೇಸಾಯ ಪದ್ಧತಿ, ತೋಟಗಾರಿಕೆ ಬೆಳೆಗಳ ಸಂಸ್ಕರಣೆ ಮತ್ತು ಮಾರುಕಟ್ಟೆ ಕುರಿತು ಮಾಹಿತಿ ನೀಡಲಾಗುವುದು.
ಮಾಹಿತಿಗೆ ಮೊ.8970870918, 9538287992, 7022679182, 8197516149 ಸಂಪರ್ಕಿಸಿ.