ಜಿಲ್ಲೆ

ಉದ್ಯೋಗಖಾತ್ರಿ ಬಿಲ್ ನೀಡದ ಗ್ರಾಪಂ ಕಚೇರಿಗೆ ದನ ಕಟ್ಟಿದ ರೈತ; ತಬ್ಬಿಬ್ಬಾದ ಅಧಿಕಾರಿಗಳು

ಡಾ.ಶ್ರೀಹರ್ಷ ಸೋರಲಮಾವು

ಹುಳಿಯಾರು: ಮನರೇಗಾ ಯೋಜನೆಯಲ್ಲಿ ನಿರ್ಮಿಸಿಕೊಂಡಿರುವ ದನದಕೊಟ್ಟಿಗೆ ಬಿಲ್ ನೀಡಲು ಸತಾಯಿಸಿದ ಚಿಕ್ಕನಾಯಕನಹಳ್ಳಿ ತಾಲೂಕು ಯಳನಡು ಗ್ರಾಪಂ ಅಧಿಕಾರಿಗಳಿಗೆ ಫಲಾನುಭವಿ ಬಿಸಿ ಮುಟ್ಟಿಸಿದರು.

ಗ್ರಾಪಂ ಕಚೇರಿಗೆ ದನ, ಕರುಗಳನ್ನು ತಂದು ಕಟ್ಟಿ ಪ್ರತಿಭಟನೆ ವ್ಯಕ್ತಪಡಿಸಿದರು. ಸರ್ಕಾರಿ ಕಚೇರಿಯೇ ಕೊಟ್ಟಿಗೆಯಂತಾಗಿದ್ದರಿAದ ವಿಚಲಿತರಾದ ಗ್ರಾಪಂ ಅಧಿಕಾರಿಗಳು ರೈತರಿಗೆ ಬೇಡಿಕೊಂಡಿದ್ದು ನಡೆಯಿತು.

2021ರಲ್ಲಿ ನಿರ್ಮಿಸಿಕೊಂಡಿರುವ ದನದ ಕೊಟ್ಟಿಗೆ ನಿರ್ಮಾಣದ ಕೂಲಿ ಹಣ ಫಲಾನುಭವಿಗಳ ಖಾತೆಗೆ ಬಂದಿದೆ ಆದರೆ, ಮೂರು ವರ್ಷದಿಂದ ಮೆಟಿರಿಯಲ್ ಬಿಲ್ ಕೊಡದೆ ಸತಾಯಿಸುತ್ತಿದ್ದಾರೆ. ಈ ಬಗ್ಗೆ ಇಒ, ಸಿಇಒಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ ಎಂದರು.

ತಾಪಂ ಇಒ ವಸಂತಕುಮಾರ್ ದೂರವಾಣಿ ಮೂಲಕ ರೈತರೊಂದಿಗೆ ಮಾತನಾಡಿ, ವಾರದಲ್ಲಿ ಸಮಸ್ಯೆ ಭಗೆಹರಿಸಿಕೊಡುತ್ತೇನೆ, ನನ್ನ ಮೇಲೆ ನಂಬಿಕೆಯಿಟ್ಟು ಪ್ರತಿಭಟನೆ ಹಿಂಪಡೆಯುವAತೆ ಮನವಿ ಮಾಡಿದರು.

ಯತೀಶ್, ಕಂಟಪ್ಪ, ಮಾರುತಿ, ಷಡಾಕ್ಷರಿ, ರಾಮಣ್ಣ, ಸುರೇಶ್, ದಯಾನಂದ್, ರಾಜಣ್ಣ, ಕುಮಾರ್ ಮತ್ತಿತರರು ಪ್ರತಿಭಟನೆಗೆ ಸಾಥ್ ನೀಡಿದರು.