ಮಧುಗಿರಿ: ಸಾಂಸಾರಿಕ ಕಲಹದಿಂದಾಗಿ ಬೇಸತ್ತ ಮಹಿಳೆಯೊಬ್ಬರು ನೀರಿನ ಕಟ್ಟೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಸಭ ವ್ಯಾಪ್ತಿ ಬಂದ್ರೇಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಗ್ರಾಮದ ತಿಪ್ಪೇಸ್ವಾಮಿಯ ಪತ್ನಿ ಸುಮಿತ್ರ 27 ವರ್ಷ ಮೃತಪಟ್ಟ ದುರ್ಧೆವಿ. ಇವರಿಬ್ಬರಿಗೂ ಒಂಬತ್ತು ವರ್ಷದ ಹಿಂದೆ ಮದುವೆಯಾಗಿತ್ತು ಆದರೆ ಮಕ್ಕಳಾಗಿರಲಿಲ್ಲ ಮೃತಪಟ್ಟವರು ಎರಡು ವರ್ಷದ ಹಿಂದೆ ತವರು ಮನೆ ಸೇರಿಕೊಂಡಿದ್ದರು.
ಇತ್ತೀಚೆಗೆ ತಿಪ್ಪೇಸ್ವಾಮಿಯವರ ತಾಯಿ ಮೃತಪಟ್ಟ ಹಿನ್ನೆಲೆಯಲ್ಲಿ ಅರಸೀಕೆರೆ ತಾಲೂಕು ಬಿದರೆ ಕಾವಲಿನಲ್ಲಿದ್ದ ಸುಮಿತ್ರ ರವರನ್ನು ಸೋಮವಾರ ಅಷ್ಟೇ ಗ್ರಾಮಕ್ಕೆ ಕರೆತಂದಿದ್ದಾರೆ. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ