ತುಮಕೂರು: ಆದಾಯಕ್ಕಿಂತಲೂ ಹೆಚ್ಚು ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ ಎಂಬ ಆರೋಪದ ಮೇಲೆ ಕೆಐಎಡಿಬಿ ಅಪರನಿರ್ದೇಶಕ ಸಿ.ಟಿ.ಮುದ್ದುಕುಮಾರ್ ಮನೆ, ಕಚೇರಿ, ಕಾರ್ಖಾನೆಗಳ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ಬಳಗ್ಗೆಯೇ ದಾಳಿ ನಡೆಸಿದ್ದು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಮೂಲತ@ ಚಿಕ್ಕನಾಯಕನಹಳ್ಳಿ ಪಟ್ಟಣದ ಮುದ್ದುಕುಮಾರ್ ಬೆಂಗಳೂರಿನ ಖನಿಜ ಭವನದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರಿಗೆ ಸೇರಿರುವ ಏಳು ಕಡೆಗಳಲ್ಲಿ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.
ಬೆಂಗಳೂರಿನ ಖನಿಜ ಭವನದ ಕೆಐಎಡಿಬಿ ಕಚೇರಿ, ನಾಗರಬಾವಿ ಎರಡನೇ ಹಂತದಲ್ಲಿರುವ ವಾಸದ ಮನೆ, ತುಮಕೂರು ಸರಸ್ವತಿಪುರಂ ಬಡಾವಣೆಯ ಮನೆ, ಚಿಕ್ಕನಾಯಕನಹಳ್ಳಿ ಪಟ್ಟಣದ ಮನೆ, ರಂಗನಾಥಪುರ ತೋಟದ ಮನೆ, ತುಮಕೂರಿನ ಅಂತರಸನಹಳ್ಳಿಯಲ್ಲಿರುವ ಪ್ಲಾಸ್ಟಿಕ್ ಬಾಟಲಿ ತಯಾರಿಕಾ ಟಕ, ತಿಪಟೂರು, ಹಾಸನದಲ್ಲಿರುವ ಮನೆಗಳೂ ಸೇರಿದಂತೆ 9 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಯಿತು.
ಗುರುವಾರ ಬೆಳಗ್ಗೆ ಆರಂಭವಾದ ದಾಳಿ ರಾತ್ರಿಯಾದರೂ ಮುಂದುವರಿದಿದ್ದು ಅಧಿಕಾರಿಗಳು ಊಟವನ್ನು ಅಲ್ಲಿಗೆ ತರಿಸಿಕೊಂಡು ತಪಾಸಣೆ ಮುಂದುವರಿಸಿದರು. ತುಮಕೂರಿನ ಸರಸ್ವತಿಪುರಂ ಹಾಗೂ ಚಿಕ್ಕನಾಯಕನಹಳ್ಳಿಯ ಮನೆಗಳಲ್ಲಿ ಮಹತ್ವದ ಕಾಗದ, ಖಾಲಿ ನಿವೇಶನಗಳ ಪತ್ರ, ಚಿನ್ನಾಭರಣ,ಲಭ್ಯವಾಗಿವೆ ಎನ್ನಲಾಗಿದ್ದು ಶೋಧಕಾರ್ಯ ಮುಂದುವರಿದಿದೆ.
ಭ್ರಷ್ಟ ಅಧಿಕಾರಿಗಳ ಮನೆಯ ಮೇಲೆ ನಡೆಯುತ್ತಿರುವ ದಾಳಿಯಲ್ಲಿ 30ಕ್ಕೂ ಹೆಚ್ಚು ಅಧಿಕಾರಿಗಳು ಭಾಗವಹಿಸಿದ್ದರು.
ಮುದ್ದುಕುಮಾರ್ಗೆ ಸೇರಿದ ರಾಜ್ಯದ ವಿವಿಧ 10 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ ಲೋಕಾಯುಕ್ತರಿಗೆ 7.41ಕೋಟಿ ರೂ. ಆಸ್ತಿ ಪತ್ತೆಯಾಗಿದೆ.3 ವಾಸದ ಮನೆಗಳು, 6 ಎಕರೆ 20 ಗುಂಟೆ ಕೃಷಿ ಜಮೀನು, 1 ಾಮ್ರ್ಹೌಸ್, 1.13 ಲಕ್ಷ ರೂ. ನಗದು, 88.75 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ, 35.40ಲಕ್ಷ ರೂ. ಬೆಲೆಬಾಳುವ ವಾಹನಗಳು, 3ಕೋಟಿ ರೂ. ಮೌಲ್ಯದ ಕೈಗಾರಿಕಾ ಶೆಡ್ ಹಾಗೂ 68.86ಲಕ್ಷ ರೂ. ಉಳಿತಾಯ ಸೇರಿ ಒಟ್ಟು 7,41,44,916ರೂ. ಮೌಲ್ಯದ ಆಸ್ತಿ ದಾಳಿ ವೇಳೆಯಲ್ಲಿಯೇ ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.