ಜಿಲ್ಲೆ

ರಜೆ ನೀಡಲು ಲಂಚ ಪಡೆದ ಮುಖ್ಯಶಿಕ್ಷಕ ಲೋಕಾ ಬಲೆಗೆ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಸಿಬ್ಬಂದಿಗೆ ಪಿತೃತ್ವ ರಜೆ ಮಂಜೂರು ಮಾಡಲು ರಜೆ ದಿನದ ವೇತನವನ್ನು ಲಂಚವಾಗಿ ಸ್ವೀಕರಿಸುತ್ತಿದ್ದ ಪ್ರೌಢಶಾಲೆ ಶಿಕ್ಷಕ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಶಿರಾ ತಾಲೂಕು ಮದಲೂರು ಹಾವನೂರು ಗ್ರಾಮಾಂತರ ಸರ್ಕಾರಿ ಅನುದಾನಿತ ಪ್ರೌಢಶಾಲೆ ಮುಖ್ಯಶಿಕ್ಷಕ ವಿ.ನಾಗರಾಜು ಅ.9ರಂದು 23000 ಹಣವನ್ನು ಪೋನ್​ಪೇ ಮೂಲಕ ಲಂಚವಾಗಿ ಸ್ವೀಕರಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಶಾಲೆಗೆ ಎಸ್​ಡಿಎ ಆರ್​.ಲೋಕೇಶ್​ ಎಂಬುವವರು 15 ದಿನ ಪಿತೃತ್ವ ರಜೆಗಾಗಿ ಅರ್ಜಿ ಸಲ್ಲಿಸಿದ್ದರು ರಜೆ ಮಂಜೂರು ಮಾಡಲು ರಜೆ ಸಮಯದ ವೇತನ 23500ರೂ.ಗಳನ್ನು ಲಂಚವಾಗಿ ನೀಡಲು ಬೇಡಿಕೆಯಿಟ್ಟಿದ್ದರು ಎನ್ನಲಾಗಿದ್ದು. ಲಂಚ ನೀಡಲಾಗದ ಲೋಕೇಶ್​ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.