ಜಿಲ್ಲೆ

ಆರ್​ಆರ್​ ಸಂಖ್ಯೆಗೆ ಆಧಾರ್​ ಜೋಡಣೆ ಕಡ್ಡಾಯ

ತುಮಕೂರು: ಕೃಷಿ ನೀರಾವರಿ ಪಂಪ್​ಸೆಟ್​ ಬಳಕೆದಾರರು ನೀರಾವರಿ ಪಂಪ್​ಸೆಟ್​ನ ವಿದ್ಯುತ್​ ಆರ್​ಆರ್​ ಸಂಖ್ಯೆಗೆ ಕಡ್ಡಾಯವಾಗಿ ಆಧಾರ್​ ಸಂಖ್ಯೆ ಜೋಡಣೆ ಮಾಡಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್​ ಪ್ರಶಾಂತ್​ ಕೂಡ್ಲಿಗಿ ಕೋರಿದ್ದಾರೆ.

ಕೃಷಿ ಪಂಪ್​ಸೆಟ್​ನ ವಾರಸುದಾರರು ಮರಣ ಹೊಂದಿದ್ದಲ್ಲಿ ಪ್ರಸ್ತುತ ಪಹಣಿಯಲ್ಲಿರುವವರ ಆಧಾರ್​ಕಾರ್ಡ್​, ಮೊಬೈಲ್​ ಸಂಖ್ಯೆ, ಹಿಂದಿನ ವಾರಸುದಾರರ ಮರಣ ಪ್ರಮಾಣ ಪತ್ರ, ಛಾಪಾಕಾಗದ ಹಾಗೂ ಪಹಣಿಯಲ್ಲಿ ಜಂಟಿ ಖಾತೆಯಾಗಿದ್ದರೆ ಉಳಿದವರ ಒಪ್ಪಿಗೆ ಪತ್ರ, ಕ್ರಯ ಪತ್ರದ ದಾಖಲೆಯನ್ನು ಸಮೀಪದ ಬೆಸ್ಕಾಂ ಶಾಖಾ ಕಚೇರಿ ಅಥವಾ ಸಂಬಂಧಿಸಿದ ಪವರ್​ ಮ್ಯಾನ್​ ಅಥವಾ ಮೀಟರ್​ ರೀಡರ್​ಗಳಿಗೆ ಸಲ್ಲಿಸಿ ಹಾಲಿ ಆರ್​.ಆರ್​.ಸಂಖ್ಯೆಯಲ್ಲಿರುವ ಹೆಸರನ್ನು
ಬದಲಾವಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.