ಜಿಲ್ಲೆ

ಚಲಿಸುವಾಗಲೇ ಸ್ಟೇರಿಂಗ್ ಲಾಕ್; ಲಾರಿ ಚಾಲಕ ಶಾಕ್

ಹುಳಿಯಾರು: ಚಲಿಸುತ್ತಿದ್ದ ಟಿಪ್ಪರ್ ಲಾರಿಯ ಸ್ಟೇರಿಂಗ್ ಏಕಾಏಕಿ ಲಾಕ್ ಆಗಿ ಹಿಂಭಾಗದ ಎರಡು ಚಕ್ರಗಳು ಲಾರಿಯಿಂದ ಬೇರ್ಪಟ್ಟು ಕಂದಕಕ್ಕೆ ಉರುಳಿಬಿದ್ದಿದೆ.

ಚಿಕ್ಕನಾಯಕನಹಳ್ಳಿ ತಾಲೂಕು ಬೆಳ್ಳಾರ ಸಮೀಪ ಘಟನೆ ನಡೆಸಿದ್ದು ಅಪಘಾತದಲ್ಲಿ ಲಾರಿ ಮಗುಚಿಬಿದ್ದು ಒಬ್ಬನಿಗೆ ಗಂಭೀರವಾಗಿ ಗಾಯಗೊಂಡಿದ್ದಾನೆ.

ಶಿರಾ ನಗರದಿಂದ ಕುರಿ ಗೊಬ್ಬರ ತುಂಬಿಕೊಂಡು ಹುಳಿಯಾರಿಗೆ ಬರುತ್ತಿದ್ದ ಲಾರಿ ಬೆಳ್ಳಾರ ಸಮೀಪ ಅಪಘಾತವಾಗಿದೆ.

ಹುಳಿಯಾರು ಹೋಬಳಿಯ ಗುರುವಾಪುರ ಗ್ರಾಮದ ರವಿ ಎಂಬಾತ ಗಾಯಗೊಂಡು ಚಿಕಿತ್ಸೆಗಾಗಿ ಶಿರಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ. ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.