ಜಿಲ್ಲೆ

ನೀರು ಕೇಳಿ ಗುಂಡು ಹಾರಿಸಿದ್ದ ದರೋಡೆಕೋರರ ಬಂಧನ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಕುಣಿಗಲ್ ತಾಲೂಕು ಉರ್ಕೆಹಳ್ಳಿಯಲ್ಲಿ ಮಾ.26ರಂದು ನೀರು ಕೇಳಿಕೊಂಡು ಮನೆಗೆ ಬಂದ ಅಪರಿಚಿತರು ಮನೆ ಮಾಲೀಕರ ಕಡೆಗೆ ಪಿಸ್ತೂಲ್‌ನಿಂದ ಫೈರ್ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜಾರ್ಖಂಡ್ ಮೂಲದ ಏಜಾಸ್ ಮಿರ್ದಹ(30), ಸಹಿಬುಲ್‌ಅನ್ಸಾರಿ(30) ಬಂಧಿತ ಆರೋಪಿಗಳು. ಕೃತ್ಯಕ್ಕೆ ಬಳಸಿದ್ದ 1 ಮೊಬೈಲ್, 1 ದ್ವಿಚಕ್ರ ವಾಹನ ಹಾಗೂ 2 ಪಿಸ್ತೂಲ್ ಮತ್ತು 4 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉರ್ಕೆಹಳ್ಳಿಯಲ್ಲಿ ನೀರು ಕೇಳಿಕೊಂಡು ಮನೆಗೆ ಬಂದು ಮನೆಯಲ್ಲಿದ್ದ ಗಂಗಣ್ಣ ಎಂಬುವವರ ಕಡೆ ಫೈರಿಂಗ್ ಮಾಡಿ ದರೋಡೆಗೆ ಯತ್ನಿಸಿದ್ದರು. ಅವರನ್ನು ಹಿಡಿಯಲು ಯತ್ನಿಸಿದಾ ದ್ವಿಚಕ್ರವಾಹನ ಏರಿ ಪರಾರಿಯಾಗಿದ್ದರು.

ಈ ಬಗ್ಗೆ ಮಾ.26ರಂದು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.