ಜಿಲ್ಲೆ

ಬಸ್‌ನಲ್ಲಿಯೇ ಹೃದಯಾಘಾತದಿಂದ ಕುಸಿದ ಬಿದ್ದ ಪ್ರಯಾಣಿಕ; ಚಾಲಕ, ನಿರ್ವಾಹಕಿ ಮಾಡಿದ್ದೇನು?

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಚಲಿಸುತ್ತಿದ್ದ ಬಸ್‌ನಲ್ಲೇ ಹೃದಯಾಘಾತಕ್ಕೀಡಾದ ಪ್ರಯಾಣಿಕನನ್ನು ಕೂಡಲೇ ಸಮೀಪಕ್ಷ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ಚಿಕ್ಕನಾಯನಹಳ್ಳಿ ತಾಲೂಕು ಹುಳಿಯಾರಿನಲ್ಲಿ ಶುಕ್ರವಾರ ನಡೆದಿದೆ.

ಹೊಸದುರ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್ಟಿಸಿ ಬಸ್‌ನಲ್ಲಿ ಹೊಸದುರ್ಗ ತಾಲೂಕಿನ ಅಲಘಟ್ಟ ಗ್ರಾಮದ 65 ವರ್ಷ ವಯಸ್ಸಿನ ಕುಮಾರಸ್ವಾಮಿ ಹಾಗೂ ಅವರ ಪತ್ನಿ ಹುಳಿಯಾರಿನಲ್ಲಿ ಬಸ್ ಏರಿ ಬೆಂಗಳೂರಿಗೆ ಟಿಕೆಟ್ ಪಡೆದು ಪ್ರಯಾಣ ಆರಂAಭಿಸಿದ್ದರು.

ಮಾರ್ಗದ ನಡುವೆ ಅವಳಗೆರೆ ಸಮೀಪ ಕುಮಾರಸ್ವಾಮಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಕುಳಿತಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಜಾಗೃತರಾದ ಬಸ್ ನಿರ್ವಾಹಕಿ ರಾಣಿ, ಚಾಲಕ ಕಂಸಾರಪ್ಪ ತಡಮಾಡದೆ ಚಿಕ್ಕನಾಯಕನಹಳ್ಳಿ ತಾಲೂಕು ಆಸ್ಪತ್ರೆಗೆ ಬಸ್‌ನಲ್ಲಿಯೇ ಕರೆದೊಯ್ದಿದ್ದಾರೆ.

ಆದರೆ, ದುರಾದೃಷ್ಟವಶತ್ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಸಾವನ್ನಪ್ಪಿರುತ್ತಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಮಾನವೀಯತೆ ಮೆರೆದ ಚಾಲಕ ಹಾಗೂ ನಿರ್ವಾಹಕಿಯ ಶ್ರಮ ವ್ಯರ್ಥವಾಗಿದೆ.