ತುಮಕೂರು: ನಗರದ ಶ್ರೀದೇವರಾಜ ಅರಸು ಬಸ್ ನಿಲ್ದಾಣದಿಂದ ಈಗಾಗಲೇ ವಾಹನಗಳ ಕಾರ್ಯಾಚರಣೆ ಪ್ರಾರಂಭವಾಗಿದ್ದು, ವಾಹನಗಳ ಕಾರ್ಯಾಚರಣೆ ಮಾಹಿತಿ, ಇನ್ನಿತರ ಸೌಲಭ್ಯ ಹಾಗೂ ಕುಂದು-ಕೊರತೆಗಳಿಗಾಗಿ ಸಹಾಯವಾಣಿ ಸಸ್ಥಾಪಿಸಲಾಗಿದೆ ಎಂದು ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಚಂದ್ರಶೇಖರ್ ತಿಳಿಸಿದ್ದಾರೆ.
ಬಸ್ ನಿಲ್ದಾಣದ ಕೆಳ ನೆಲಮಹಡಿಯಿಂದ ನಗರ ಸಾರಿಗೆ, ಗ್ರಾಮೀಣ ಸಾರಿಗೆ ಹಾಗೂ ಬೆಂಗಳೂರು ಕಡೆಗಿನ ಸಾರಿಗೆಗಳು ಕಾರ್ಯಾಚರಣೆಯಾಗುತ್ತಿದ್ದು, ಈ ಬಗ್ಗೆ ಯಾವುದೇ ಮಾಹಿತಿ ಬೇಕಾದಲ್ಲಿ ಮೊ.960648356, ಬಸ್ ನಿಲ್ದಾಣದ ಮೇಲಿನ ನೆಲಮಹಡಿ ಯಿಂದ ಅಂತರ್ ಜಿಲ್ಲಾ ಸಾರಿಗೆಗಳು ಕಾರ್ಯಾಚರಣೆಯಾಗುತ್ತಿದ್ದು, ಈ ಬಗ್ಗೆ ಯಾವುದೇ ಮಾಹಿತಿ ಬೇಕಾದಲ್ಲಿ ಮೊ.9606483561 ಹಾಗೂ ಇನ್ನಿತರ ಸಾರಿಗೆ ಕಾರ್ಯಾಚರಣೆ ಮಾಹಿತಿಗಾಗಿ ಬಸ್ ನಿಲ್ದಾಣದ ಮೇಲ್ವಿಚಾರಕರ ಮೊ.9741495772 ಸಂಪರ್ಕಿಸಿ.
ಈ ಎಲ್ಲಾ ಸಹಾಯ ವಾಣಿ ಪ್ರತಿದಿನ ಬೆಳಗ್ಗೆ 6 ರಿಂದ ರಾತ್ರಿ 10ರ ವರೆಗೂ ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.