ಜಿಲ್ಲೆ

ನನ್ನ ಹೇಳಿಕೆಯನ್ನು ತಿರುಚಿ ಹೈಕಮಾಂಡ್​ಗೆ ದೂರಿದರು

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು:ಮತಗಳ್ಳತನದ ಬಗ್ಗೆ ನಾನು ಸತ್ಯವನೇ ಹೇಳಿದ್ದೆ, ನಮ್ಮ ಸರ್ಕಾರ ಇತ್ತು, ನಮ್ಮ ಬಿಎಲ್​ಒಗಳು ಇದ್ದರು. ಅವರು ಸರಿಯಾಗಿ ಕೆಲಸ ಮಾಡುತ್ತಾರೋ ಇಲ್ಲವೋ ಎಂದು ಯಾರು ನೋಡಬೇಕಿತ್ತು, ನಾವೇ ಅಲ್ಲವೇ ಬಿಎಲ್​ಒಗಳನ್ನು ನೇಮಕ ಮಾಡಿದ್ದು ಪಕ್ಷದವರು, ಅವರು ಸರಿಯಾಗಿ ಕೆಲಸ ಮಾಡುತ್ತಾರೋ ಇಲ್ಲವೆ ಎಂಬುದನ್ನು ನಾವು ನೋಡಬೇಕಿತ್ತು ಎಂದು ಮಾಜಿ ಸಚಿವ ಕೆ.ಎನ್​.ರಾಜಣ್ಣ ಹೇಳಿದರು.

ಮಿಡಿಗೇಶಿಯಲ್ಲಿ ಮಾತನಾಡಿದ ಅವರು, ಸರಿಯಾಗಿ ಕೆಲಸ ಮಾಡಿದರೆ ಹೇಗೆ ನಕಲಿ ವೋಟ್​ ಸೇರುತ್ತದೆ. ಪದವರು ಎಚ್ಚೆತ್ತುಕೊಳ್ಳಬೇಕಿತ್ತು ಈಗ ನಮ್ಮ ನಾಯಕರಾದ ರಾಹುಲ್​ಗಾಂಧಿ ನಮ್ಮ ಕಣ್ಣು ತೆರೆಸಿದ್ದಾರೆ ಎಂದಷ್ಟೇ ನಾನು ಹೇಳಿದ್ದೇ ಆದರೆ, ಇದೇ ಹೇಳಿಕೆಯನ್ನು ತಿರುಚಿ ಹೈಕಮಾಂಡ್​ಗೆ ದೂರಿದರು ಎಂದು ರಾಜಣ್ಣ ಅಸಮಧಾನ ಹೊರಹಾಕಿದರು.