ಜಿಲ್ಲೆ

ಕುಮಾರಸ್ವಾಮಿ ಸತ್ಯಹರಿಶ್ಚಂದ್ರನ ಮೊಮ್ಮಗನ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ತೀಕ್ಷವಾಗಿ ಪ್ರತಿಕ್ರಿಯಿಸಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರೇನು ಸತ್ಯಹರಿಶ್ಚಂದ್ರ ನವರ ಮೊಮ್ಮಕ್ಕಳಾ ಎಂದು ಪ್ರಶ್ನಿಸಿದ್ದಾರೆ.

ಅವರೇನು ಹೇಳಿದರೂ ನಾವು ಪ್ರಶ್ನೆ ಮಾಡೊಕೆ ಹೋಗೋದಿಲ್ಲ, ಅವರು ಹೇಳೊದೆಲ್ಲಾ ಸುಳ್ಳು, ಯಾರೆಲ್ಲಾ ಹೇಳುತ್ತಿದ್ದಾರೆಅವರೇ ಅದರಲ್ಲಿ ಎಕ್ಸ್ಪರ್ಟ್ ಇರ್ತಾರೆ ಅದಕ್ಕೆ ಅದನ್ನು ಮಾತನಾಡುತ್ತಿದ್ದಾರೆ ಎಂದರು.

ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ತಿಂಗಳು ಆಗಿದೆ ಅಷ್ಟೆ, ಎರಡೂವರೆ ವರ್ಷ ಆಗಿಲ್ಲ. ಹೊಸ ಸರ್ಕಾರ ಬಂದಾಗ ವರ್ಗಾವಣೆ ನಡೆಯುವುದು ಸಾಮಾನ್ಯ ಎಂದು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.