ಜಿಲ್ಲೆ

ಕನ್ನಡ ರಾಜ್ಯೋತ್ಸವ ದತ್ತಿ ಪ್ರಶಸ್ತಿ

ತುಮಕೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ರ್ನಿದಿಷ್ಟ ಠೇವಣಿ ಇಟ್ಟಿರುವ ಹಣದಿಂದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿರುವ ಐದು ಜನ ಸಾಧಕರಿಗೆ ನೀಡಲಾಗುವ ಕನ್ನಡ ರಾಜ್ಯೋತ್ಸವ ದತ್ತಿ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ.

2024ನೇ ಸಾಲಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ತುಮಕೂರು ಜಿಲ್ಲೆಯ ಐದು ಜನ ಸಾಹಿತಿಗಳಿಗೆ ಪ್ರಶಸ್ತಿ ನೀಡುತ್ತಿದ್ದು ಕಮಲಾ ನರಸಿಂಹ(ಸಿರಾ), ಡಾ.ಓ.ನಾಗರಾಜು(ಕೊರಟಗೆರೆ), ಅಮ್ಮಸಂದ್ರ ಸುರೇಶ್​(ತುರುವೇಕೆರೆ), ಪ್ರೊ.ಕರಿಯಣ್ಣ(ತುಮಕೂರು) ಹಾಗೂ ಕಲಾಶ್ರೀ(ತುಮಕೂರು) ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಪುರಸ್ಕತರಿಗೆ ಪ್ರಶಸ್ತಿ ಫಲಕ, ನಗದು ಮತ್ತು ಶಾಲು ಹೊದಿಸಿ ಸನ್ಮಾನಿಸಲಾಗುವುದು. ಪ್ರಶಸ್ತಿ ನ.30ರಂದು ಶನಿವಾರ ಬೆಳಗ್ಗೆ 10.30ಕ್ಕೆ ತುಮಕೂರು ನಗರದ ಗಾಜಿನ ಮನೆಯಲ್ಲಿ ಏರ್ಪಡಿಸಲಾಗಿರುವ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೀಡಲಾಗುವುದು ಎಂದು ಜಿಲ್ಲಾ ಕಸಾಪ ಪ್ರಕಟಣೆ ತಿಳಿಸಿದೆ.