ತುಮಕೂರು: ಇಂಗ್ಲಿಷ್ ವ್ಯಾಮೋಹದಿಂದ ಹೊರ ಬಂದು ಕನ್ನಡ ಭಾಷೆ ಬಗೆಗಿನ ರ್ನಿಲಕ್ಷ ಕೈಬಿಡದಿದ್ದರೆ ಕನ್ನಡ ಕಾವಲು ಸಮಿತಿ, ಗಡಿನಾಡ ಕನ್ನಡ ಸಮಿತಿಯಂತ ನೂರಾರು ಸಮಿತಿಗಳು ಅಸ್ತಿತ್ವಕ್ಕೆ ಬಂದರೂ ಪ್ರಯೋಜನವಾಗುವುದಿಲ್ಲ ಎಂದು ಕೇಂದ್ರ ಕಸಾಪ ನಿಕಟಪೂರ್ವ ಅಧ್ಯಕ್ಷ ನಾಡೋಜ ಡಾ.ಮನುಬಳಿಗಾರ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಕೆಎಸ್ಆರ್ಟಿಸಿ ಕನ್ನಡ ಕ್ರಿಯಾ ಸಮಿತಿವತಿಯಿಂದ ಭಾನುವಾರ ಆಯೋಜಿಸಿದ್ದ ಕನ್ನಡ ಜಾಗೃತಿ ಕಾರ್ಯಕ್ರಮದಲ್ಲಿ ವಿ.ಡಿ.ಹನುಮಂತರಾಯರ "ಬದುಕಿಗಾಗಿ ಬವಣೆ' ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಇಂಗ್ಲಿಷ್ ಭಾಷೆಯಲ್ಲಿರುವುದು ಮಾತ್ರ ಜ್ಞಾನ, ಅದರಿಂದ ಮಾತ್ರ ಹೊಟ್ಟೆಪಾಡು ನೀಗಿಸಬಹುದು ಎಂಬ ಭ್ರಮೆಯಿಂದ ಕನ್ನಡಿಗರು ಹೊರಬರಬೇಕಿದೆ ಎಂದರು.
ಕನ್ನಡ ಭಾಷೆಗೆ ಎರಡುವರೆ ಸಾವಿರ ವರ್ಷಗಳ ಇತಿಹಾಸ ಇದೆ. ಕನ್ನಡ ಮಾಧ್ಯಮದಲ್ಲಿಯೇ ಓದಿದ ಅನೇಕ ಮಹನೀಯರು ಪ್ರಸಿದ್ಧ ವಿಜ್ಞಾನಿಗಳಾಗಿ, ಐಎಎಸ್&ಐಪಿಎಸ್ ಅಧಿಕಾರಿಗಳಾಗಿ, ಉತ್ತಮ ವೈದ್ಯರಾಗಿ ದೇಶ, ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ. ಅವರು ನಮಗೆ ಸ್ಪೂರ್ತಿಯಾಗಬೇಕು. ಅಲ್ಲದೆ ಕಸಾಪ ಹಾಗೂ ಕನ್ನಡಪರ ಸಂಟನೆಗಳ ನಿರಂತರ ಹೋರಾಟದ ಫಲವಾಗಿ ಶೇ.5ರ ಮೀಸಲಾತಿಯನ್ನು ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ನೀಡಲಾಗಿದೆ ಎಂದು ತಿಳಿಸಿದರು.
ಕನ್ನಡಿಗರು ಭಾಷಾಭಿಮಾನವನ್ನು ದಣ ಭಾರತದ ಇತರೆ ರಾಜ್ಯಗಳನ್ನು ನೋಡಿ ಕಲಿಯಬೇಕಿದೆ. ಪ್ರಧಾನಮಂತ್ರಿ, ರಾಷ್ಟ್ರಪತಿ ಬಂದರೂ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಆಯಾ ರಾಜ್ಯಗಳ ಅಧಿಕೃತ ಭಾಷೆಯಲ್ಲಿಯೇ ಮಾತನಾಡುತ್ತಾರೆ. ಆದರೆ, ನಮ್ಮ ರಾಜ್ಯದಲ್ಲಿ ಅದಕ್ಕೆ ತದ್ವಿರುದ್ದ ನಡವಳಿಕೆಗಳಿವೆ ಎಂದು ಕೆಎಸ್ಆರ್ಟಿಸಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವ.ಚ.ಚನ್ನೇಗೌಡ ಹೇಳಿದರು.
ನಗರ ಮತ್ತು ಹಳ್ಳಿಗಾಡಿನಲ್ಲಿ ನಡೆಯುವ ಟನೆಗಳನ್ನು ತುಮಕೂರು ಭಾಗದ ಆಡು ಭಾಷೆಯಲ್ಲಿ ವಿ.ಡಿ.ಹನುಮಂತರಾಯರು "ಬದುಕಿಗಾಗಿ ಬವಣೆ' ಕೃತಿಯಲ್ಲಿ ದಾಖಲಿಸಿದ್ದಾರೆ. ಇದು ಅವರೊಬ್ಬರ ಮನದಾಳದ ಮಾತುಗಳಲ್ಲ. ನಮ್ಮ ನಿಮ್ಮೆಲ್ಲರ ಬದುಕಿನ ಬವಣೆಗಳಾಗಿವೆ. ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುವುದಲ್ಲದೆ, ವಾಸ್ತವ ಚಿತ್ರಣವನ್ನು ಮುಂದಿಡುತ್ತವೆ. ಇಂತಹ ಪುಸ್ತಕಗಳು ನಮ್ಮೊಳಗಿರುವ ಶಿಕ್ಷಣವಂತರನ್ನು ಪ್ರಜ್ಞಾವಂತರನ್ನಾಗಿಸಲಿ ಎಂದು ರಾಜ್ಯ ವೈಜ್ಞಾನಿಕ ಪರಿಷತ್ತಿನ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಅತ್ಯಂತ ಶ್ರೇಷ್ಟವಾದದ್ದು, ಇದರಲ್ಲಿ ವೈಚಾರಿಕತೆ, ವೈಜ್ಞಾನಿಕ, ಬಂಡಾಯ, ಸಮಾನತೆ, ಸೌಹಾರ್ದತೆ ಎಲ್ಲವು ಇದೆ. ಸೌಹಾರ್ದತೆ ಎಂಬುದು ಈ ನಾಡಿನ ಗುರುತು. ಇದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸ ಆಗಬೇಕಿದೆ.
ಡಾ.ಮನುಬಳಿಗಾರ್ ನಿಕಟಪೂರ್ವ ಅಧ್ಯಕ್ಷ, ಕೇಂದ್ರ ಕಸಾಪ